ಮೆಕ್ಸಿಕೋ ಭೂಕಂಪಕ್ಕೆ 6 ಮಂದಿ ಬಲಿ

ಮೆಕ್ಸಿಕೋ: ದಕ್ಷಿಣ ಮೆಕ್ಸಿಕೋದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ. 6 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಮನೆಯಿಂದ ರಸ್ತೆಗೆ ಓಡಿ ಬಂದಿದ್ದಾರೆ. ಮನೆಗಳು ಕುಸಿದಿವೆ, ರಸ್ತೆಗಳು ಬಿರುಕುಬಿಟ್ಟಿವೆ. ಹುವಾಟುಲ್ಕೋದಲ್ಲಿ ಕಟ್ಟಡ ಕುಸಿತದಿಂದ ಓರ್ವ ಮೃತಪಟ್ಟಿದ್ದು ಮತ್ತೋರ್ವ ಗಾಯಗೊಂಡಿರುವುದಾಗಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಯಲ್ ತಿಳಿಸಿದ್ದಾರೆ.
ಸ್ಯಾನ್ ಜುವಾನ್‍ನ ಮನೆಯೊಂದು ಕುಸಿದುಬಿದ್ದು ಮತ್ತೋರ್ವ ಮೃತಪಟ್ಟಿರುವುದಾಗಿ ಗವರ್ನರ್ ಓಆಕ್ಸಾಕಾ ಮಾಹಿತಿ ನೀಡಿದ್ದಾರೆ. ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಯಂತ್ರ ಬಿದ್ದು ಅವರು ಮೃತಪಟ್ಟಿದ್ದಾರೆ. ಮತ್ತೋರ್ವ ಅಓವಾಕ್ಸಾ ಪ್ರದೇಶದಲ್ಲಿ ಮನೆಯ ಗೋಡೆ ಬಿದ್ದು ಸಾವನ್ನಪ್ಪಿದ್ದಾರೆ. ಭೂಕಂಪ ಕೇಂದ್ರ ಬಿಂದು ಪ್ರದೇಶದಲ್ಲಿ ಬೆಂಕಿ ಕೂಡ ಉತ್ಪತ್ತಿಯಾಗುತ್ತಿದ್ದು ಇದರಿಂದ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಚರ್ಚ್, ಹೆದ್ದಾರಿಗಳು, ಬ್ರಿಡ್ಜ್‍ಗಳಿಗೂ ಕೂಡ ಹಾನಿಯುಂಟಾಗಿದೆ. ಕಳೆದ 35 ವರ್ಷಗಳಿಂದ 7ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿಲ್ಲ.

Leave a Reply

Your email address will not be published. Required fields are marked *