ಮೂಲ್ಕಿ: ಉದ್ಯಮಿಯ ಬರ್ಬರ ಹತ್ಯೆ, ಕಾರ್ನಾಡ್ ಪರಿಸರದ ಐವರ ಸೆರೆ?

ಮಂಗಳೂರು: ಮೂಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಜಂಕ್ಷನ್ ಸಮೀಪದ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಮೂಡಬಿದ್ರೆಯ ಜ್ಯುವೆಲ್ಲರಿ ಮಾಲಕನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ನಿನ್ನೆ ಸಂಜೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ನಾಡ್ ಪರಿಸರದ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕಾರ್ನಾಡ್ ದರ್ಗಾ ರೋಡ್ ನಿವಾಸಿ ಕಾಂಗ್ರೆಸ್ ಮುಖಂಡ ಮುನೀರ್, ಪುತ್ರ ಇಯಾಝ್ ಮತ್ತು ಅಳಿಯ ಲತೀಫ್ ಮೂಡಬಿದ್ರೆ ಮೇಲೆ ಕಾರ್, ಬೈಕ್‍ಗಳಲ್ಲಿ ಬೆನ್ನಟ್ಟಿ ಬಂದಿದ್ದ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗ ದಾಳಿ ನಡೆಸಿದ್ದರು. ಮುನೀರ್ ಮೇಲೆ ಹಲ್ಲೆ ನಡೆಯುವುದನ್ನು ಕಂಡ ಲತೀಫ್ ಅಡ್ಡಬಂದಿದ್ದು ಆತನನ್ನು ಹಿಗ್ಗಾಮುಗ್ಗಾ ಕೊಚ್ಚಿದ ಬಳಿಕ ಇಯಾಝ್ ಮೇಲೂ ದಾಳಿ ನಡೆಸಿ ಪರಾರಿಯಾಗಿದ್ದರು. ಲತೀಫ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದಾರೆ.ಮುನೀರ್ ಮೇಲೆ ಪೂರ್ವದ್ವೇಷದಿಂದ ತಂಡ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಕಾರ್ನಾಡ್ ದರ್ಗಾ ರಸ್ತೆಯ ನಿವಾಸಿಯಾಗಿರುವ ಕಾಂಗ್ರೆಸ್‍ನ ಯುವ ಮುಖಂಡ ಮತ್ತಾತನ ಸಹಚರರು ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಆತನ ತಂದೆ, ಮತ್ತು ನಾಲ್ವರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ದರ್ಗಾ ಕಮಿಟಿಯಲ್ಲಿನ ಅವ್ಯವಹಾರ ಮತ್ತು ಮುಸ್ಲಿಂ ಸಂಘಟನೆಯೊಂದಿಗಿನ ಮನಸ್ತಾಪದಿಂದ ಈ ಹಿಂದೆ ಜೊತೆಯಲ್ಲೇ ಇದ್ದ ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳ ಭಿನ್ನಾಭಿಪ್ರಾಯವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ಹೇಳಿವೆ. ದುಷ್ಕರ್ಮಿಗಳು ಮುನೀರ್‍ನನ್ನು ಟಾರ್ಗೆಟ್ ಮಾಡಿಕೊಂಡಿದ್ದು ಅಡ್ಡ ಬಂದ ಆತನ ಅಳಿಯ ಲತೀಫ್ ದಾರುಣ ಸಾವನ್ನಪ್ಪಿದ್ದಾರೆ, ಪುತ್ರ ಇಯಾಝ್ ಗಂಭೀರ ಗಾಯಗೊಂಡಿದ್ದಾರೆ. ಮುನೀರ್ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದು ವರ್ಷದ ಹಿಂದೆ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಐಶಾರಾಮಿ ಕಾರ್, ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನ ಸಹಚರರನ್ನು ಐಷಾರಾಮಿ ಕಾರುಗಳ ಸಮೇತ ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *