ಮೂಲ್ಕಿ: ಉದ್ಯಮಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ ಇಬ್ಬರು ನಿರ್ದಯಿ ಹಂತಕರ ಸೆರೆ!!

ಮಂಗಳೂರು: ಕಳೆದ ವಾರ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಜಂಕ್ಷನ್ ಬಳಿ ನಡೆದಿದ್ದ ಉದ್ಯಮಿಯ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡು ಉದ್ಯಮಿ ಮೇಲೆ ನಿರ್ದಯವಾಗಿ ಚಾಕುವಿನಿಂದ ಹತ್ತಾರು ಬಾರಿ ಇರಿದಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಇಂದು ಸಂಜೆ ಮೂಲ್ಕಿ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಬಂಧಿತರನ್ನು ಕಿನ್ನಿಗೋಳಿ ಬಳಿಯ ಉಲ್ಲಂಜೆ ನಿವಾಸಿ ಮುಹಮ್ಮದ್ ವಫಾ(23) ಹಾಗೂ ಪಕ್ಷಿಕೆರೆ ನಿವಾಸಿ ಮುಸ್ತಫಾ(25) ಎಂದು ಗುರುತಿಸಲಾಗಿದೆ.
ಮೂಲ್ಕಿ ಕಾಂಗ್ರೆಸ್ ಮುಖಂಡ ಮುನೀರ್, ಅಳಿಯ ಅಬ್ದುಲ್ ಲತೀಫ್, ಪುತ್ರ ಇಯಾಜ್ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ದಾಳಿ ಚಾಕು, ದೊಣ್ಣೆ, ಸೋಡಾ ಬಾಟ್ಲಿಯಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ ಲತೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಮುನೀರ್, ಇಯಾಜ್ ಗಂಭೀರ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂಲ್ಕಿ ಕಾರ್ನಾಡ್ ಪರಿಸರದ ನಾಲ್ವರನ್ನು ಮರುದಿನವೇ ಬಂಧಿಸಿದ್ದರು.
ಕಾರ್ನಾಡ್ ನಿವಾಸಿ ಯುವ ಕಾಂಗ್ರೆಸ್ ಮೂಲ್ಕಿ ವಲಯಾಧ್ಯಕ್ಷ ಹಕೀಮ್ ಕಾರ್ನಾಡ್ ಘಟನೆಯ ಪ್ರಧಾನ ಸೂತ್ರಧಾರನಾಗಿದ್ದು ಆತ ತಲೆಮರೆಸಿದ್ದಾನೆ. ಇನ್ನೂ ಹಲವು ಮಂದಿ ಬಂಧನವಾಗಬೇಕಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *