ಮೂಡಬಿದ್ರಿ: `ಕಬಾಬ್’ ನಲ್ಲಿ `ಹುಳ’ ಕಂಡು ಗ್ರಾಹಕರಿಂದ ಗಲಾಟೆ!

ಮಂಗಳೂರು: ಮೂಡಬಿದ್ರಿ ಸಮೀಪದ ಆಲಂಗಾರ್ ಎಂಬಲ್ಲಿನ `ಗೋಲ್ಡನ್ ಗೇಟ್’ ಹೆಸರಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿದ್ದ ಗ್ರಾಹಕರು ಕಬಾಬ್ ನಲ್ಲಿ ಹುಳಗಳನ್ನು ಕಂಡು ಹೋಟೆಲ್ ಮಾಲಕರ ಜೊತೆ ಗಲಾಟೆ ಮಾಡಿದ ಘಟನೆ ಮಧ್ಯಾಹ್ನ ನಡೆದಿದೆ.
ಗ್ರಾಹಕರು ಊಟದ ಜೊತೆ ಕಬಾಬ್ ಆರ್ಡರ್ ಮಾಡಿದ್ದು ಕಬಾಬ್ ನಲ್ಲಿ ಸತ್ತ ಹುಳಗಳು ಕಾಣಿಸಿಕೊಂಡಿದೆ. ಈ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಸದ್ಯ ಆಲಂಗಾರ್, ಮೂಡಬಿದ್ರಿ ಪರಿಸರದಲ್ಲಿ ಕಬಾಬ್ ನಲ್ಲಿ ಹುಳ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *