ಮುಚ್ಚಿದ್ದ ಸೆಂಟ್ರಲ್ ಮಾರ್ಕೆಟ್ ತೆರೆಯಲು ಯತ್ನ: ಪ್ರತಿಭಟನೆ, ಪೊಲೀಸ್ ಬಂದೋಬಸ್ತ್!

ಮಂಗಳೂರು: ಎರಡು ತಿಂಗಳಿನಿಂದ ಮುಚ್ಚಿದ್ದ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಇಂದು ಮುಂಜಾನೆ ಮತ್ತೆ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಈ ವೇಳೆ ವ್ಯಾಪಾರಿಗಳು ಮತ್ತು ವರ್ತಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರುಕಟ್ಟೆಯನ್ನು ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು, ಮುಂಜಾನೆ ಅಂಗಡಿ ತೆರೆಯಲು ಮುಂದಾದಾಗ ಅಧಿಕಾರಿಗಳ ಜೊತೆ ವ್ಯಾಪಾರಿಗಳು ವಾಗ್ವಾದ ನಡೆಸಿದ್ದಾರೆ. ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚಿ ಮಂಗಳೂರು ಮಹಾನಗರ ಪಾಲಿಕೆ ಆದೇಶವಿದ್ದರೂ ಇಂದು ಮತ್ತೆ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದರು. ಏ.7ರಂದು ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಕೇಂದ್ರ ಮಾರುಕಟ್ಟೆಯನ್ನು ಪಾಲಿಕೆ ಮುಚ್ಚಿತ್ತು. 151 ಸಗಟು ಮತ್ತು 300 ಚಿಲ್ಲರೆ ವ್ಯಾಪಾರಿಗಳನ್ನು ಸುರತ್ಕಲ್ ಎಪಿಎಂಸಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಪಾಲಿಕೆ ಆದೇಶ ಉಲ್ಲಂಘಿಸಿ ಮತ್ತೆ ಕೇಂದ್ರ ಮಾರುಕಟ್ಟೆ ತೆರೆಯಲು ಮುಂದಾಗಿದ್ದಾರೆ. ಸದ್ಯ ಮಂಗಳೂರಿನ ಕೇಂದ್ರ ಮಾರುಕಟ್ಟೆ ಎದುರು ಭಾರೀ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ವ್ಯಾಪಾರಿಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಕಮಿಷನರ್ ಅವರು, ಮಾರುಕಟ್ಟೆ ತೆರೆದರೆ ಎಲ್ಲಾ ವ್ಯಾಪಾರಿಗಳ ಲೈಸೆನ್ಸ್ ರದ್ದು ಪಡಿಸುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *