ಮುಕ್ಕ ಬಳಿ ಕಾರ್ ಗಳ ಡಿಕ್ಕಿ: ಗದ್ದೆಗುರುಳಿದ ಕಾರ್

ಸುರತ್ಕಲ್: ಠಾಣಾ ವ್ಯಾಪ್ತಿಯ ಮುಕ್ಕ ಚೆಕ್ ಪೋಸ್ಟ್ ಸಮೀಪ ಕಾರ್ ಗಳು ಡಿಕ್ಕಿ ಹೊಡೆದುಕೊಂಡಿದ್ದು ಒಂದು ಕಾರ್ ಗದ್ದೆಗೆ ಉರುಳಿದ ಘಟನೆ ಇಂದು ಮುಂಜಾನೆ ನಡೆದಿದೆ.
ಘಟನೆಯಲ್ಲಿ ಕಾರ್ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಳೆಯಂಗಡಿ ಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಿಗೆ ಚೇಳಾಯರು ಒಳ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿ ದ್ದ ಕಾರ್ ಡಿಕ್ಕಿ ಹೊಡೆದಿದೆ. ಎರಡು ಕಾರ್ ಗಳೂ ಜಖಂಗೊಂಡಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Leave a Reply

Your email address will not be published. Required fields are marked *