ಮುಂಬೈ ಸೀರಿಯಲ್ ಬ್ಲಾಸ್ಟ್ ಅಪರಾಧಿ ಯೂಸುಫ್ ಮೆಮನ್ ಜೈಲಲ್ಲಿ ಸಾವು!

ಮುಂಬೈ: 1993 ಇಸವಿಯಲ್ಲಿ ನಡೆದಿದ್ದ ಮುಂಬೈ ಸರಣಿ ಬ್ಲಾಸ್ಟ್ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾಗಿದ್ದ ಯೂಸುಫ್ ಮೆಮನ್(54) ಇಂದು ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ಸಾವಿಗೀಡಾಗಿದ್ದಾನೆ. ಯೂಸುಫ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಜೈಲಿನ ಮೂಲಗಳು ಹೇಳಿವೆ.
ಮುಂಬೈ ಸ್ಫೋಟಕ್ಕೆ ಸಂಬಂಧಿಸಿ ಸೋದರರಾದ ಯೂಸುಫ್ ಮೆಮನ್ ಮತ್ತು ಇಸಾ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಸ್ಫೋಟಕ್ಕೆ ಸಂಚು ರೂಪಿಸಿದ್ದ ಸಹೋದರ ಟೈಗರ್ ವೆಮನ್ ಪಾಕಿಸ್ತಾನದಲ್ಲಿ ಸೆರೆವಾಸದಲ್ಲಿದ್ದಾನೆ. ಈತನ ಹಿರಿಯ ಸಹೋದರ ಯಾಕೂಬ್ ಮೆಮನ್‍ನನ್ನು ಕೆಲವು ವರ್ಷಗಳ ಹಿಂದೆ ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

Leave a Reply

Your email address will not be published. Required fields are marked *