ಮಾದಕ ಬಾಡಿ ಪೇಟಿಂಗ್‌ ಮೂಲಕ
ವೋಜ್ನಿಯಾಕಿ ಮೈಮಾಟ ಪ್ರದರ್ಶನ

ವಾಷಿಂಗ್ಟನ್: ಡೆನ್ಮಾರ್ಕ್‍ನ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ ಸದ್ಯ ಟೆನಿಸ್‌ ಅಂಗಣದಿಂದ ದೂರ ಸರಿದು, ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ವಿಚಾರ. ಟೆನಿಸ್‌ ಅಂಗಣದಲ್ಲಿದ್ದ ವೇಳೆ ತನ್ನ ಮಾದಕ ಮೈಮಾಟ ಹಾಗೂ ಆಟದ ಮೂಲಕ ಕ್ಯಾರೊಲಿನ್‌ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಇದೇ ಕ್ಯಾರೊಲಿನ್‌ ತನ್ನ ಮೈಮಾಟದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಉಡುಪಿನಂತೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕ್ಯಾರೋಲಿನ್ ವೋಜ್ನಿಯಾಕಿ ಒಂದು ಕಾಲದಲ್ಲಿ ಟೆನ್ನಿಸ್ ಲೋಕದಲ್ಲಿ ಮಿಂಚಿದ್ದರು. ಅವರು 2018ರಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಆದರೆ 2020ರ ಮೊದಲ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಭಾಗವಹಿಸಿದ ನಂತರ ಜನವರಿ 24ರಂದು ದಿಢೀರ್ ಆಗಿ ನಿವೃತ್ತಿ ಘೋಷಿಸಿ ಟೆನ್ನಿಸ್ ಪ್ರೇಮಿಗಳಿಗೆ ಆಘಾತ ನೀಡಿದ್ದರು. 29 ವರ್ಷದ ಸುಂದರಿ ಕ್ಯಾರೋಲಿನ್ ವೋಜ್ನಿಯಾಕಿ ಅವರು ಟೆನ್ನಿಸ್ ನಿವೃತ್ತಿ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಅಮೆರಿಕದ ‘ಸ್ಪೋಟ್ರ್ಸ್ ಇಲ್ಯುಸ್ಟ್ರೇಟೆಡ್ ಸ್ವಿಮ್ ಸೂಟ್’ ನಿಯತಕಾಲಿಕೆಗಾಗಿ ‘ಬಾಡಿ ಪೈಂಟಿಂಗ್’ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. ಕ್ಯಾರೋಲಿನ್ ವೋಜ್ನಿಯಾಕಿ ಅವರು 15 ಗಂಟೆಗೂ ಅಧಿಕ ಸಮಯದಲ್ಲಿ ಬಾಡಿ ಪೇಂಟಿಂಗ್ ಮಾಡಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅಮೆರಿಕದ ಸೇಂಟ್ ವಿನ್ಸೆಂಟ್‍ನ ಬೀಚ್‍ನಲ್ಲಿ ಖ್ಯಾತ ಛಾಯಾಗ್ರಾಹಕ ಫ್ರೆಡೆರಿಕ್ ಫಿನೆಟ್ ಮಾಜಿ ಟೆನ್ನಿಸ್ ಆಟಗಾರ್ತಿಯ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಟೆನ್ನಿಸ್ ಆಟದೊಂದಿಗೆ ಕ್ಯಾರೋಲಿನ್ ವೋಜ್ನಿಯಾಕಿ ತಮ್ಮ ಸೌಂದರ್ಯದಿಂದಲೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲೂ ಕ್ಯಾರೋಲಿನ್ ವೋಜ್ನಿಯಾಕಿ ಮಿಂಚಿದ್ದಾರೆ.

Leave a Reply

Your email address will not be published. Required fields are marked *