ಮಾಣಿ: ಅಪರಿಚಿತ ಯುವಕನ ಶವ ಪತ್ತೆ

ಮಂಗಳೂರು: ಇಂದು ಮುಂಜಾನೆ 6 ಗಂಟೆಯ ಸುಮಾರಿಗೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಸಮೀಪ ಅಂದಾಜು ಮೂವತ್ತರಿಂದ ನಲವತ್ತು ವಯಸ್ಸಿನ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಈವರೆಗೆ ಈತನ ಈತನ ಗುರುತು ಪತ್ತೆಯಾಗಿರುವುದಿಲ್ಲ. ಈತನ ಗುರುತು ಪತ್ತೆಯಾದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಪೊಲೀಸರು ಮನವಿ ಮಾಡಿದ್ದಾರೆ.
ಯುವಕನ ಮೈಮೇಲೆ ಅಂಡರ್ ವೇರ್ ಹಾಗೂ ಅಂಗಿಯಿದ್ದು ದೇಹದಲ್ಲಿ ಗಾಯದ ಗುರುತು ಕಂಡುಬಂದಿಲ್ಲ. ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *