ಮಹಾಮಾರಿ ಕೊರೋನಾಗೆ ದ.ಕ. ಜಿಲ್ಲೆಯಲ್ಲಿ 9ನೇ ಬಲಿ! ಉಸಿರಾಟದ ಸಮಸ್ಯೆಯಿಂದ ವೃದ್ಧ ಮೃತ್ಯು

ಮಂಗಳೂರು: ಮಹಾಮಾರಿ ಕೊರೊನಾಗೆ ಮತ್ತೋರ್ವ ವೃದ್ಧ ಬಲಿಯಾಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ.
70 ವರ್ಷ ಪ್ರಾಯದ ವೃದ್ಧ ಜೂನ್‌‌ 7 ರಂದು ಬೆಂಗಳೂರಿನಿಂದ ಆಗಮಿಸಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಜೂನ್‌‌ 12ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹ ಹಾಗೂ ನ್ಯೂಮೋನಿಯಾದಿಂದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *