ಮಳಲಿಯ ಯುವಕ ದುಬೈಯಲ್ಲಿ ಹೃದಯಾಘಾತಕ್ಕೆ ಬಲಿ

ಬಜ್ಪೆ: ಕೈಕಂಬ ಸಮೀಪದ ಮಳಲಿ ಕಾಜಿಲ ಹೌಸ್ ನಿವಾಸಿ ಯಶವಂತ್(37) ಎಂಬವರು ದುಬೈಯಲ್ಲಿ ಹೃದಯಾಘಾತಕ್ಕೀಡಾಗಿ ಕಳೆದ ಶುಕ್ರವಾರ ಮೃತಪಟ್ಟಿರುವ ಮಾಹಿತಿ ದೊರಕಿದೆ. ಇಂದು ಶವಪರೀಕ್ಷೆ ವರದಿ ಬರಲಿದ್ದು ಬಳಿಕವಷ್ಟೇ ಸಾವಿನ ಕಾರಣ ಬಯಲಾಗಲಿದೆ.
2 ವರ್ಷದ ಹಿಂದೆ ಯಶವಂತ್ ಎಸಿ ಮೆಕ್ಯಾನಿಕ್ ಉದ್ಯೋಗಕ್ಕೆ ಗಲ್ಫ್‍ಗೆ ಹೋಗಿದ್ದರು. ಯಶವಂತ್ ಅವರ ಪೆÇೀಟೋ ಹಾಗು ಬಜಪೆ ಬಳಿಯ ಪ್ರಶಾಂತ್ ನಾರಾಯಣ ಎನ್ನುವರು ಮೃತಪಟ್ಟಿದ್ದಾರೆ, ಮಾಹಿತಿ ಇದ್ದವರು ತಿಳಿಸಬೇಕು ಎಂದು ಹೇಳುವ ಆಡಿಯೋ ಮೇಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *