ಮಲ್ಯ ಸದ್ಯ ಇಂಡಿಯಾಕ್ಕೆ ಬರಲ್ಲ..!!

ಲಂಡನ್: ಆರ್ಥಿಕ ಅಪರಾಧಿ ಕಿಂಗ್ ಫಿಷರ್ ಉದ್ಯಮಿ ವಿಜಯ್ ಮಲ್ಯನನ್ನು ಜೂನ್ ಮೊದಲ ವಾರ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ ಇದರ ಪ್ರಕ್ರಿಯೆ ವಿಳಂಬವಾದ ಕಾರಣ ಸದ್ಯ ಇಂಡಿಯಾಕ್ಕೆ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ಸುದ್ದಿಮೂಲ ಹೇಳಿದೆ.
ಇಂಗ್ಲೆಂಡಿನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಮೇ 14ರಂದು ವಜಾಗೊಂಡಿದ್ದು, ನಂತರ ಸುಪ್ರೀಂಕೋರ್ಟ್ ನಲ್ಲಿ ಮರು ಅರ್ಜಿ ಹಾಕುವ ಅವಕಾಶ ಕಳೆದುಕೊಂಡಿದ್ದರು. ಹೀಗಾಗಿ, ಮಲ್ಯರನ್ನು ಇನ್ನು 28 ದಿನಗಳಲ್ಲಿ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ಕುರಿತಂತೆ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದ್ದು, ಪ್ರೀತಿ ಅವರು ಹಸ್ತಾಂತರ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿ ಅಂತಿಮ ಅಂಕಿತ ಇನ್ನೂ ಹಾಕಿರದ ಕಾರಣ ಮಲ್ಯ ಸದ್ಯ ಭಾರತಕ್ಕೆ ಬರುತ್ತಿಲ್ಲ. ಮುಂಬೈನಲ್ಲಿ ಮಲ್ಯನನ್ನು ವಶಕ್ಕೆ ಪಡೆಯಲು ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿನಿರ್ದೇಶನಾಲಯ ಸಿದ್ಧವಾಗಿತ್ತು.