ಮಲ್ಪೆ: ಲಾಕ್ ಡೌನ್’ ಆರ್ಥಿಕ ಸಂಕಷ್ಟ, ಬೋಟಲ್ಲೇ `ಕಬಡ್ಡಿಪಟು’ ಸುಸೈಡ್!

ಮಂಗಳೂರು: ಸಾಲ ಮಾಡಿ ಮೀನುಗಾರಿಕಾ ಬೋಟ್ ಖರೀದಿಸಿದ್ದ ಯುವಕ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಬೋಟಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಲ್ಪೆ ಮೀನುಗಾರಿಕಾ ಜೆಟ್ಟಿಯಲ್ಲಿ ನಡೆದಿದೆ. ಮೃತರನ್ನು ಮಲ್ಪೆ ತೊಟ್ಟಂ ನಿವಾಸಿ ಭಾಗ್ಯರಾಜ್(30) ಎಂದು ಗುರುತಿಸಲಾಗಿದೆ.
ಇವರು ಸಾಲ ಮಾಡಿ ಮನೆ ಕಟ್ಟಿದ್ದಲ್ಲದೆ ಮೀನುಗಾರಿಕಾ ಬೋಟೊಂದನ್ನು ಖರೀದಿ ಮಾಡಿದ್ದರು. ಆದರೆ ಅಷ್ಟರಲ್ಲಿ ಕೊರೊನಾ ಲಾಕ್ ಡೌನ್ ಪ್ರಾರಂಭವಾಗಿದ್ದು ಭಾಗ್ಯರಾಜ್ ಸಾಲದ ಸುಳಿಗೆ ಸಿಲುಕಿದ್ದರೆನ್ನಲಾಗಿದೆ. ಉತ್ತಮ ಕಬಡ್ಡಿಪಟುವಾಗಿದ್ದ ಭಾಗ್ಯರಾಜ್ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ಇಂದು ಬೋಟಲ್ಲಿ ಅವರ ಶವ ನೇಣು ಬಿಗಿದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಲ್ಪೆ ಠಾಣಾ ಪೊಲೀಸರು ಭೇಟಿ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *