ಮನೆಮನೆಗೆ ಮೀನು‌ಮಾರುತ್ತಿದ್ದ ವ್ಯಕ್ತಿಗೆ ಕೊರೊನಾ ದೃಢ: ಮಂಗಳೂರಲ್ಲಿ ಆತಂಕ

[et_pb_section][et_pb_row][et_pb_column type=”4_4″][et_pb_text]

ಮಂಗಳೂರು: ಮನೆಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಕೋವಿಡ್-19 ಸೋಂಕು ಪತ್ತೆಯಾದ ಘಟನೆ ಮಂಗಳೂರಿನ ಎಕ್ಕೂರು ಎಂಬಲ್ಲಿ ನಡೆದಿರುವುದು‌ ಆತಂಕಕ್ಕೆ ಕಾರಣವಾಗಿದೆ.

ಎಕ್ಕೂರಿನ 27 ವರ್ಷದ ಯುವಕನೊಬ್ಬ ಶೀತದ ಸಮಸ್ಯೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದ. ಈ ವೇಳೆ ಆತನ ಗಂಟಲು ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆತನಿಗೆ ಕೋವಿಡ್-19 ಸೋಂಕು ಇರುವುದು ಖಚಿತವಾಗಿದೆ.

ಈ ಯುವಕ ನಗರದ ಬಂದರಿಗೆ ತೆರಳಿ ಅಲ್ಲಿಂದ ಮೀನು ತಂದು, ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಜಿಲ್ಲಾಡಳಿತ ಮಾಡುತ್ತದೆ.‌

[/et_pb_text][/et_pb_column][/et_pb_row][/et_pb_section]

1 thought on “ಮನೆಮನೆಗೆ ಮೀನು‌ಮಾರುತ್ತಿದ್ದ ವ್ಯಕ್ತಿಗೆ ಕೊರೊನಾ ದೃಢ: ಮಂಗಳೂರಲ್ಲಿ ಆತಂಕ

  1. Alla avanige corona ide anta gotadru bittady yake neev?
    Yenu tamase nadiytadede ya illi?
    Alla nivella manglore Annu target madutidira? Alla Riga ide anta gotada mele avnu muslim anta gotagi bitra or alla nimma labakagi bitra?

Leave a Reply

Your email address will not be published. Required fields are marked *