ಮದ್ಯಪ್ರಿಯರಿಗೆ ಗುಡ್ ನ್ಯೂಸ್, ಹೊಸ ಬಿಯರ್ ತಯಾರಿಗೆ ಅಬಕಾರಿ ಇಲಾಖೆ ಅನುಮತಿ!

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆ ಹೊಸದಾಗಿ ಬಿಯರ್ ತಯಾರು ಮಾಡಲು ಅನುಮತಿ ನೀಡಿದ್ದು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.
ಮೈಕ್ರೋ ಬ್ರಿವರೀಸ್ ಹೊಸದಾಗಿ ಬಿಯರ್ ಉತ್ಪಾದನೆ ಮಾಡಬಹುದು. ಕಂಟೈನರ್, ಗ್ಲಾಸ್‌ಗಳ ಮೂಲಕ ಅವರನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬಹುದು ಎಂದು ಅಬಕಾರಿ ಇಲಾಖೆ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.
ಒಬ್ಬ ವ್ಯಕ್ತಿ 2 ಲೀಟರ್ ತನಕ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು. ಮೈಕ್ರೋ ಬ್ರಿವರೀಸ್ ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ಕಾರ್ಯ ನಿರ್ವಹಣೆ ಮಾಡಬಹುದು ಎಂದು ಅಬಕಾರಿ ಇಲಾಖೆ ಹೇಳಿದೆ. ಈ ಆದೇಶ ಜೂನ್ 30ರ ತನಕ ಜಾರಿಯಲ್ಲಿರುತ್ತದೆ.
ಈ ಆದೇಶವನ್ನು ಹೊರತುಪಡಿಸಿದರೆ ಮದ್ಯ ಖರೀದಿ ವಿಚಾರದಲ್ಲಿ ಮೇ 12ರಂದು ಹೊರಡಿಸಿದ ಎಲ್ಲಾ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಜೂನ್ 30ರ ತನಕ ಇರುವ ಸ್ಟಾಕ್‌ಗಳನ್ನು ಖಾಲಿ ಮಾಡಲು ಈಗಾಗಲೇ ಅನುಮತಿ ಕೊಡಲಾಗಿದೆ.

Leave a Reply

Your email address will not be published. Required fields are marked *