ಮದ್ಯದ ಅಮಲಿನಲ್ಲಿ ರಸ್ತೆಯಲ್ಲೇ ಯುವತಿಯ ಟಾಪ್‍ಲೆಸ್ ವಾಕ್!

ಕೋಲ್ಕತ್ತಾ: ಮದ್ಯದ ಕಿಕ್ ತಲೆಗೇರಿದರೆ ಜನರು ಯಾವ ರೀತಿ ವರ್ತಿಸುತ್ತಾರೆ ಎಂಬುದಕ್ಕೆ ಕೊಲ್ಕತ್ತಾದಲ್ಲಿ ತಾಜಾ ಉದಾಹರಣೆ ಸಿಕ್ಕಿದೆ. ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳು ಟಾಪ್ ಇಲ್ಲದೆ ರಸ್ತೆಗೆ ಇಳಿದು ಸುಮಾರು 5 ಕಿ.ಮೀ ನಡೆದ ಘಟನೆ ನಡೆದಿದೆ. ಅಸಭ್ಯವಾಗಿ ನಡೆದು ಹೋಗುತ್ತಿದ್ದ ಯುವತಿಯನ್ನು ಬಳಿಕ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಈಕೆ ಕೋಲ್ಕತ್ತಾದ ಪದ್ಮಪುಕೂರ್ ಪ್ರದೇಶದ ನಿವಾಸಿಯಾಗಿದ್ದಾಳೆ. ಯುವತಿ ಮಂಗಳವಾರ ರಾತ್ರಿ ಮದ್ಯ ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆಗೆ ಕೋಲ್ಕತ್ತಾದ ಜನನಿಬಿಡ ಪ್ರದೇಶ ಇಂದಿರಾ ಗಾಂಧಿ ರೆಡ್ ರೋಡ್‍ನಿಂದ ನಡೆದು ಇಡನ್ ಗಾರ್ಡ್ ವರೆಗೂ ನಡೆದುಕೊಂಡು ಹೋಗಿದ್ದಳು. ಆದರೆ ರಸ್ತೆಯುದ್ದರಕ್ಕೂ ಅಸಭ್ಯವಾಗಿ ವರ್ತಿಸುತ್ತಾ, ಟಾಪ್ ಇಲ್ಲದೆ ಸುಮಾರು 5 ಕಿ.ಮೀ. ನಡೆದಿದ್ದಾಳೆ. ಇದರಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯುವತಿಯ ವರ್ತನೆಯಿಂದ ಬೇಸತ್ತ ಕೆಲ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದು ವ್ಯಾನ್‍ನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.