ಮದುವೆಯಿಂದ ಹಿಂದೆ ಸರಿದ ಯುವಕ: ಯುವತಿ ಆತ್ಮಹತ್ಯೆ

ಚೆನ್ನೈ: ಮದುವೆಗೆ ಪ್ರಿಯಕರ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ನಡೆಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಿರುಥನಿ ಬಳಿಯ ನಲ್ಲಾಟೂರು ಗ್ರಾಮದ ನಿವಾಸಿ ಮಣಿಮೇಘಲೈ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಮಣಿ ಮೇಘಲೈ ಪ್ರಿಯಕರ ರಾಜ್‍ಕುಮಾರ್, ಮನೆಯವರ ತೀವ್ರ ವಿರೋಧದ ಹಿನ್ನೆಲಯಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಣಿ ಮತ್ತು ರಾಜ್‍ಕುಮಾರ್ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಾಜ್‍ಕುಮಾರ್ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು. ಇವರಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆಗ ಎರಡು ಮನೆಯವರು ಬೇರೆ ಬೇರೆ ಜಾತಿ ಎಂದು ಇವರ ಮದುವೆಯನ್ನು ನಿರಾಕರಿಸಿದ್ದಾರೆ. ಈ ವೇಳೆ ಎಲ್ಲಿಯಾದರೂ ಹೋಗಿ ಮದುವೆಯಾಗೋಣ ಎಂದು ಮಣಿ ಪ್ರಿಯಕರನಿಗೆ ಒತ್ತಡ ಹಾಕಿದ್ದಾಳೆ. ಆದರೆ ರಾಜ್‍ಕುಮಾರ್, ನಾನು ನನ್ನ ಕುಟುಂಬವನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದರಿಂದ ನೊಂದ ಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  

Leave a Reply

Your email address will not be published. Required fields are marked *