ಮದುವೆಗೂ ಮುನ್ನ ತಂದೆಯಾಗಲಿದ್ದಾರೆ ಪಾಂಡ್ಯಾ!!

ಮುಂಬೈ: ಮುಗಿಲೆತ್ತರದ ಸಿಕ್ಸರ್ ಮೂಲಕ ವಿಶ್ವ ಕ್ರಿಕೆಟ್ನ ಗಮನ ಸೆಳೆಯುತ್ತಿರುವ ಹಾರ್ದಿಕ್ ಪಾಂಡ್ಯ ವಿವಾಹವಾಗುವ ಮುಂಚೆಯೇ ತಂದೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಬಹು ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಹೊಸ ವರ್ಷದ ಮೊದಲ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.
ಇನ್ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರೋ ಫೋಟೋವನ್ನು ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಪ್ರಯಾಣವನ್ನು ಹೊಂದಿದ್ದೇವೆ. ಈ ಬಾಂದವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ. ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಸರಣಿಯನ್ನು ಮುಂದೂಡಲಾಯಿತು. ಆದರೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಭದ್ರಪಡಿಸಿಕೊಳ್ಳಲಿದ್ದಾರೆ.