ಮತ್ತೆ ಲಾಕ್ ಡೌನ್ ಕುರಿತು ತಜ್ಞರ ಸಮಿತಿ ನಿರ್ಧಾರ -ಶ್ರೀರಾಮುಲು
ಬೆಂಗಳೂರು: ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡಬೇಕು ಎಂದು ಒತ್ತಡ ಹೆಚ್ಚುತ್ತಿರುವ ಕುರಿತು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಲಾಕ್ ಡೌನ್ ನಿರ್ಧರಿಸಲು ತಜ್ಞರ ಸಮಿತಿ ಇದೆ. ಅವರ ಸಲಹೆಯ ಬಳಿಕ ಸರಕಾರ ನಿರ್ಧಾರ ಕೈಗೊಳ್ಳುತ್ತದೆ' ಎಂದಿದ್ದಾರೆ. ನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು ಈ ಬಗ್ಗೆ ಮಾತಾಡಿದ ಶ್ರೀರಾಮುಲು,
ನಾಳೆ ನಿರ್ಧರಿಸಿದಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತದೆ. ರಾಜ್ಯದಲ್ಲಿ 8,48,203ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಕ್ಕಳು ಮತ್ತವರ ಪೋಷಕರು ಭಯಪಡಬೇಕಿಲ್ಲ. ನಾನು ಶಿಕ್ಷಣ ಸಚಿವರ ಜೊತೆ ಹತ್ತಾರು ಬಾರಿ ಸಭೆ ಮಾಡಿದ್ದೇನೆ. ಕಂಟೈನ್‍ಮೆಂಟ್ ಝೋನ್ ನಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸುತ್ತೇವೆ’ ಎಂದು ಹೇಳಿದ್ದಾರೆ.