ಮತ್ತೆ ಕಂಪಿಸಿದ ರಾಜಧಾನಿ!

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ. ದೆಹಲಿಯಿಂದ 13 ಕಿ.ಮೀ ದೂರದ ಗುರುಗ್ರಾಮ ಗಡಿಯಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಹಾಗೆಯೇ 18 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಕಳೆದ ಏಪ್ರಿಲ್‍ನಿಂದ ದೆಹಲಿ-ಎನ್‍ಸಿಆರ್‍ನಲ್ಲಿ 14 ಬಾರಿ ಭೂಕಂಪ ಸಂಭವಿಸಿದೆ.
ಜೂ. 3ರಂದು ಕೂಡ ದೆಹಲಿಯ ಸುತ್ತಮುತ್ತಲ ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೇ 29 ರಂದು ರಾತ್ರಿ 9.08 ಕ್ಕೆ ಪೂರ್ವ ಹರಿಯಾಣ ಮತ್ತು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‍ಸಿಆರ್) ಕೆಲವು ಭಾಗಗಳನ್ನು ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿತ್ತು. ಭೂಕಂಪದ ಕೇಂದ್ರಬಿಂದು ಹರಿಯಾಣದ ರೋಹ್ಟಕ್ ಮತ್ತು ಆಳ 3.3 ಕಿ.ಮೀನಷ್ಟಿತ್ತು. ಕಳೆದ ಒಂದು ತಿಂಗಳಲ್ಲಿ ದೆಹಲಿ ಮತ್ತು ಹತ್ತಿರದ ಪ್ರದೇಶಗಳು ಕನಿಷ್ಠ 6-7 ಭೂಕಂಪಗಳನ್ನು ಅನುಭವಿಸಿವೆ.

Leave a Reply

Your email address will not be published. Required fields are marked *