ಮಡಂತ್ಯಾರ್: ಮೀನು ಮಾರುತ್ತಿದ್ದವನಿಗೂ ಕೊರೋನಾ! ಸ್ಥಳೀಯರಲ್ಲಿ ಆತಂಕ!!

ಮಂಗಳೂರು: ಒಂದೂವರೆ ತಿಂಗಳ ಹಿಂದೆ ವಿದೇಶದಿಂದ ಬಂದು ಮಡಂತ್ಯಾರ್ ನ ಅಕ್ಕನ ಮನೆಯಲಿದ್ದು ಮೀನು ವ್ಯಾಪಾರ ಮಾಡುತ್ತಿದ್ದ ಬಿಸಿರೋಡ್ ನಿವಾಸಿ ಯುವಕನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈತನಿಂದ ಮೀನು ಖರೀದಿ ಮಾಡಿದವರು ಆತಂಕಕ್ಕೆ ಒಳಗಾಗಿದ್ದು ಆತನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಬಿಸಿರೋಡ್ ನಿವಾಸಿ ಯುವಕ ವಿದೇಶದಿಂದ ಬಂದು ಕ್ವಾರಂಟೈನ್ ಆಗಿದ್ದ. ಬಳಿಕ ಮಡಂತ್ಯಾರ್ ನ ಅಕ್ಕನ ಮನೆಯಲ್ಲಿ ಉಳಿದು ಮೀನು ವ್ಯಾಪಾರ ಮಾಡಿಕೊಂಡಿದ್ದ. ಅಲ್ಲಿ ಅಕ್ಕ, ಭಾವ ಮತ್ತು ಇಬ್ಬರು ಮಕ್ಕಳಿದ್ದು ಎಲ್ಲರನ್ನೂ ಕ್ವಾರಂಟೈನ್ ಮಾಡಿ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.