ಮಂಗಳೂರು: ಸುರತ್ಕಲ್ ನಿವಾಸಿ ಯುವಕ, ಬಂಟ್ವಾಳದ ವೃದ್ಧೆ ಸಹಿತ ಕೊರೋನಾಗೆ ಮತ್ತಿಬ್ಬರು ಬಲಿ!

ಮಂಗಳೂರು: ಬಂಟ್ವಾಳ ಮೂಲದ ವೃದ್ದೆ ಮತ್ತು ಸುರತ್ಕಲ್ ಮೂಲದ ಯುವಕ ಕೊರೋನಾ ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಬಂಟ್ವಾಳದ 57 ವರ್ಷದ ವೃದ್ದೆ ಕೊರೋನಾಗೆ ಬಲಿಯಾದರೆ, ಸುರತ್ಕಲ್ ನ ಇಡ್ಯಾ ನಿವಾಸಿ 31 ವರ್ಷದ ಯುವಕ ಕೊರೋನಾಗೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೃದ್ದೆ ಸಾವನ್ನಪ್ಪಿದರೆ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.

Leave a Reply

Your email address will not be published. Required fields are marked *