ಮಂಗಳೂರು: ಮ್ಯಾನ್ ಹೋಲ್ ನಲ್ಲಿ ಇಳಿದು ಚರಂಡಿ ಬ್ಲಾಕ್ ಸರಿಪಡಿಸಿದ ಕಾರ್ಪೋರೇಟರ್ !
ಮಂಗಳೂರು: ಚರಂಡಿ ಬ್ಲಾಕ್ ಆಗಿದ್ದು ದೂರು ನೀಡಿದ ಕೂಡಲೇ ಸರಿಪಡಿಸುವ ಭರವಸೆ ನೀಡಿದ್ದಲ್ಲದೆ ತಾವೇ ಸ್ವತಃ ಮ್ಯಾನ್ ಹೋಲ್ ಗಿಳಿದು ಬ್ಲಾಕ್ ಸರಿಪಡಿಸಿದ ನಗರದ ಕಾರ್ಪೊರೇಟರ್ ಒಬ್ಬರು ಜನರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕದ್ರಿ ಕಂಬಳ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ಮನೋಹರ ಶೆಟ್ಟಿ ಜನಪ್ರತಿನಿಧಿ ಅಂತಂದ್ರೆ ಹೇಗಿರಬೇಕು ಅಂತ ತೋರಿಸಿ ಉಳಿದವರಿಗೆ ಮಾದರಿಯಾಗಿದ್ದಾರೆ.
ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾಗಿತ್ತು. ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿ ಮ್ಯಾನ್ ಹೋಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪಲಿಲ್ಲ. ಇದನ್ನು ಗಮನಿಸಿದ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ಸರಿಪಡಿಸಲು ಹೇಳಿದ್ದಾರೆ. ಆದರೂ ಕಾರ್ಮಿಕರು ಮ್ಯಾನ್ ಹೋಲ್ ಗಿಳಿದು ಕೆಲಸ ಮಾಡಲು ಮುಂದಾಗದ್ದನ್ನು ಕಂಡು ತಾವೇ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿ ಚೇಂಬರ್ ಒಳಗಡೆ ಇಳಿದು ಸ್ವತಃ ಕೆಲಸ ಮಾಡಿದ್ದಾರೆ. ಕಾರ್ಪೊರೇಟರ್ ಕಾರ್ಯಕ್ಕೆ ಜನರು ಶಹಬ್ಬಾಸ್ ಅಂದಿದ್ದಾರೆ.
