ಮಂಗಳೂರಿನ ಐವರು ವೈದ್ಯರಿಗೂ ಕೊರೊನಾ ಪಾಸಿಟಿವ್!

ಮಂಗಳೂರು: ಐವರು ವೈದ್ಯರಿಗೆ ಕೊರೊನಾ ದೃಢಪಟ್ಟ ಘಟನೆ‌ ಗುರುವಾರ ಮಂಗಳೂರಿನಲ್ಲಿ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ನಗರದ ಎರಡು ಸರ್ಕಾರಿ ಆಸ್ಪತ್ರೆಗಳ ಮೂವರು, ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇವರ ಸಂಪರ್ಕದಲ್ಲಿದ್ದ 30 ವೈದ್ಯರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಸೋಂಕಿತರಲ್ಲಿ 28 ವರ್ಷದ ಯುವ ವೈದ್ಯ, 28 ವರ್ಷದ ಇಬ್ಬರು ವೈದ್ಯೆಯರು, 27 ವರ್ಷದ ಇಬ್ಬರು ವೈದ್ಯೆಯರು ಸೇರಿದ್ದಾರೆ ಎನ್ನಲಾಗಿದೆ.

ಪಾಸಿಟಿವ್ ಕಂಡುಬಂದ ಎಲ್ಲಾ ವೈದ್ಯರು ನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದವರು ಎಂದು ತಿಳಿದು ಬಂದಿದೆ. ಇದರಲ್ಲಿ ಒಬ್ಬರು ವೈದ್ಯರು ನಗರದ ಫ್ಲ್ಯಾಟ್ ಒಂದರ ಇದ್ದರೆನ್ನಲಾಗಿದ್ದು, ಇವುಗಳನ್ನು ಸೀಲ್‌ಡೌನ್ ಮಾಡಲು ಉದ್ದೇಶಿಸಲಾಗಿದೆ.‌ ಈ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ನಗರದ ಖಾಸಗಿ ಆಸ್ಪತ್ರೆಗೆ ಇತ್ತೀಚೆಗೆ ಬೇರೆ ಚಿಕಿತ್ಸೆಗಾಗಿ ಬಂದಿದ್ದ ರೋಗಿಗೆ ಪಾಸಿಟಿವ್‌ ಬಂದಿದ್ದು ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಕೂಡಾ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ವೈದ್ಯರು ಪಿಪಿಇ‌ ಕಿಟ್‌ ಧರಿಸಿ ಸಾಕಷ್ಟು ಸುರಕ್ಷಾ ನಿಯಮ ಪಾಲಿಸಿದ್ದರೂ ಸಹ ಅವರಿಗೇ ಕೊರೊನಾ ದೃಢಪಟ್ಟಿದೆ ಎನ್ನುವುದನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕಿದೆ.‌ ನಿರ್ಲಕ್ಷ್ಯ ವಹಿಸಿದರೆ ಸಾಮುದಾಯಿಕವಾಗಿ ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಘಟನೆ‌‌ ಸಾರ್ವಜನಿಕರ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

Leave a Reply

Your email address will not be published. Required fields are marked *