ಮಂಗಳೂರಲ್ಲಿ ರಸ್ತೆಗಿಳಿದ ಬಸ್‍ಗಳು: ಆತಂಕದಲ್ಲೇ ಜನರ ಸಂಚಾರ!

ಮಂಗಳೂರು: ಮಂಗಳೂರಿನಲ್ಲಿ ಇಂದಿನಿಂದ ಅರ್ಧದಷ್ಟು ಖಾಸಗಿ ಬಸ್‍ಗಳು ರಸ್ತೆಗಿಳಿದಿದ್ದು, ಪ್ರಯಾಣಿ ಕರಲ್ಲಿ ಭೀತಿ ಆರಂಭವಾಗಿದೆ. ಆದರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವುದರಿಂದ ಪ್ರಯಾಣಿಕರು ಬಸ್‍ನಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.
ಪ್ರತೀ 15 ನಿಮಿಷಕ್ಕೊಮ್ಮೆ ಬಸ್ ಸಂಚಾರ ನಡೆಸಲಿದ್ದು, ಶೇ.50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅವಕಾಶ ವಿದೆ. ದ.ಕ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಖಾಸಗಿ ಬಸ್ ಗಳ ಸಂಚಾರ ಆರಂಭಿ ಸಿವೆ. ಮಾಸ್ಕ್ ಧರಿಸದಿದ್ದರೆ ಪ್ರಯಾ ಣಿಕರಿಗೆ ಬಸ್‍ನೊಳಗಡೆ ಪ್ರವೇಶವಿಲ್ಲ ಎಂಬೆಲ್ಲಾ ಷರತ್ತುಗಳನ್ನು ವಿಧಿಸಲಾಗಿದೆ.
ಶೇ.15 ಟೆಕೆಟ್ ದರ ಹೆಚ್ಚಳ:
ಬಸ್ ಟಿಕೆಟ್‍ನ ಹಿಂದಿನ ದರದಿಂದ ಬರೋಬ್ಬರಿ ಶೇ.15 ಹೆಚ್ಚಿಸಲಾಗಿದೆ. ಬಸ್‍ನಲ್ಲಿ ಶೇ.50ರಷ್ಟು ಪ್ರಯಾಣಿಕರನ್ನು ತುಂಬಿಸಿ ಸಂಚಾರ ವ್ಯವಸ್ಥೆ ಮಾಡಿರುವುವುದರಿಂದ ಬಸ್ ಮಾಲಕರು ಅನಿವಾರ್ಯವಾಗಿ ದರವನ್ನು ಹೆಚ್ಚಿಸಿದ್ದಾರೆ. ಇದು ಮೊದಲೇ ಕೆಲಸವಿಲ್ಲದೆ ಮನೆಯಲ್ಲಿರುವ ಬಡ ಪ್ರಯಾಣಿಕರಿಗೆ ಭಾರೀ ಹೊರೆಯಾಗಿದೆ.

Leave a Reply

Your email address will not be published. Required fields are marked *