ಭ್ರಷ್ಟ ಅಧಿಕಾರಿ ದಾಸೇಗೌಡ ಮನೆ ಮೇಲೆ ಎಸಿಬಿ ರೈಡ್! ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ!!

ಮಂಗಳೂರು: ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆ, ಆಸ್ತಿಯ ಮೇಲೆ ಇಂದು ಮುಂಜಾನೆ ಎಸಿಬಿ ದಾಳಿ ನಡೆಸಿದ್ದು ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಕೆ‌.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ನಿವಾಸದ ಮೇಲೆ ದಾಳಿ ನಡೆದಿದ್ದು ಶೋಧ ಕಾರ್ಯ ನಡೆಯುತ್ತಿದೆ. ಮಂಗಳೂರು ಮತ್ತು ಮಂಡ್ಯದಲ್ಲಿ ಎಸಿಬಿ ಏಕಕಾಲಕ್ಕೆ ದಾಳಿ ನಡೆದಿದ್ದು ಮಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.


ಮಂಗಳೂರಿನಲ್ಲಿ ಡಿ.19 ರಂದು 5 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಬಿದ್ದಿದ್ದ ದಾಸೇಗೌಡ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ. ನಗರದಲ್ಲಿ ಕರ್ಫ್ಯೂ ಮತ್ತು ಕೊರೊನಾ ಲಾಕ್ ಡೌನ್ ಇದ್ದಿದ್ರಿಂದ ಕಾರ್ಯಾಚರಣೆ ಮುಂದೂಡಿದ್ದ ಎಸಿಬಿ ಇಂದು ದಾಳಿ ಸಂಘಟಿಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. ಮಂಗಳೂರಿನಲ್ಲಿ ಒಂದು ಫ್ಲಾಟ್ ಸೇರಿ ಮೂರ್ನಾಲ್ಕು ಮನೆ ಪತ್ತೆ‌ ಯಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆ 11 ಸೈಟ್, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ. ಲಂಚ ಸ್ವೀಕಾರ ಆರೋಪದಡಿ ಅಮಾನತ್ತಿನಲ್ಲಿರುವ ದಾಸೇಗೌಡ. ಮಂಗಳೂರು ಎಸಿಬಿ ಎಸ್ಪಿ ಉಮಾಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನಾಯ್ಕ್ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿದೆ.

Leave a Reply

Your email address will not be published. Required fields are marked *