ಬಿಹಾರ: ಭಾರೀ ಸಿಡಿಲಿಗೆ 83 ಮಂದಿ ಬಲಿ!

ಬಿಹಾರ: ಬಿಹಾರದಲ್ಲಿ ಮಿಂಚು-ಸಿಡಿಲು ಹಾಗೂ ಭಾರೀ ಮಳೆಗೆ ಕಳೆದೆರಡು ದಿನಗಳಿಂದ 83 ಮಂದಿ ಮೃತಪಟ್ಟಿದ್ದಾರೆ.
ಬಿಹಾರದ 13 ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಸಿಡಿಲಿಗೆ ಹಲವಾರು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಗೋಪಾಲ್ ಗಂಜ್ ಜಿಲ್ಲೆಯೊಂದರಲ್ಲೇ ಬರೋಬ್ಬರಿ 13 ಮಂದಿ ಸಾವಿಗೀಡಾಗಿದ್ದಾರೆ.
ನಾವಡ, ಮಧುಬಾನಿ ಜಿಲ್ಲೆಗಳಲ್ಲಿ ತಲಾ 8, ಸಿವಾನ್ ಮತ್ತು ಬಾಗಲ್‍ಪುರ್‍ನಲ್ಲಿ ತಲಾ 6, ಈಸ್ಟ್ ಚಂಪರನ್, ದರ್ಬಾಂಗ ಮತ್ತು ಔರಂಗಾಬಾದ್‍ನಲ್ಲಿ ತಲಾ 3, ಪಶ್ಚಿಮ ಚಂಪರನ್, ಕಿಶನ್ ಗಂಜ್, ಜೆಹನಾಬಾದ್, ಜಮುಯಿ, ಪುರೆನಾ, ಸುಪೌಲ್, ಕೈಮರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಡಿಲುಯ ಬಡಿದು ಹಲವಾರು ಮನೆಗಳಿಗೆ ಹಾನಿಯಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *