ಬೆಳ್ತಂಗಡಿ: ವಿದ್ಯುತ್ ಶಾಕ್; ಲೈನ್ ಮೆನ್ ದಾರುಣ ಮೃತ್ಯು

ಮಂಗಳೂರು: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಬಳಿಯ ಹುಣಸೆಕಟ್ಟೆಯಲ್ಲಿ ನಡೆದಿದೆ. ಬಿಜಾಪುರ ಮೂಲದ ಬಸವರಾಜು(26) ಮೃತ ದುರ್ದೈವಿ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ವಿದ್ಯುತ್ ಕಂಬವೊಂದರ ಪಿನ್ ನಲ್ಲಿ ಸಮಸ್ಯೆ ಉಂಟಾಗಿತ್ತು. ಸ್ಥಳೀಯರು ನೀಡಿದ ದೂರಿನ ಮೇರೆಗೆ ಬಸವರಾಜು ವಿದ್ಯುತ್ ಕಂಬವೇರಿ ಪರಿವರ್ತಕ ಪರಿಶೀಲಿಸಿ ಚಾರ್ಜ್ ಮಾಡುವ ಸಮಯದಲ್ಲಿ ಶಾಕ್ ತಗಲಿ ಸಾವನ್ನಪ್ಪಿದ್ದಾರೆ.