ಬೆಳ್ತಂಗಡಿ: ಮನೆಮಂದಿಯನ್ನು ಕಟ್ಟಿಹಾಕಿ ಲಕ್ಷಾಂತರ ಮೌಲ್ಯದ ನಗ-ನಗದು ದರೋಡೆ!

ಮಂಗಳೂರು: ಇಂದು ನಸುಕಿನ ಜಾವ ಮನೆಗೆ ನುಗ್ಗಿದ ದರೋಡೆಕೋರರು ಮನೆಮಂದಿಯನ್ನು ಕಟ್ಟಿಹಾಕಿ ಲಕ್ಷಾಂತರ ಮೌಲ್ಯದ ನಗ-ನಗದು ದರೋಡೆ ಮಾಡಿದ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕಳ್ಮಂಜ ಗ್ರಾಮದ ನೀರ ಚಿಲುಮೆ ಎಂಬಲ್ಲಿ ನಡೆದಿದೆ.
ಉಜಿರೆಯಲ್ಲಿ ಅಡಿಕೆ ವ್ಯಾಪಾರ ಮಾಡುವ ಅಚ್ಯುತ ಭಟ್ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು ಅಂದಾಜು 40 ಪವನ್ ಚಿನ್ನ, 1 ಕೆಜಿ ಬೆಳ್ಳಿ, 25 ಸಾವಿರ ರೂ. ನಗದು ದರೋಡೆ ಮಾಡಲಾಗಿದೆ. ನಸುಕಿನಲ್ಲಿ ನಾಯಿ ಬೊಗಳಿದ್ದನ್ನು ಕೇಳಿ ಅಚ್ಯುತ ಭಟ್ ಹೊರಬಂದಿದ್ದು ಈ ವೇಳೆ ದರೋಡೆಕೋರರು ಅವರನ್ನು ಸಹಿತ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು, ಬೆರಳಚ್ಚು, ಶ್ವಾನದಳ ಭೇಟಿ ನೀಡಿದೆ.

Leave a Reply

Your email address will not be published. Required fields are marked *