ಬೆಳ್ತಂಗಡಿ: ತಂದೆಯನ್ನೇ ಕಡಿದು ಕೊಲೆಗೈದ ಮಕ್ಕಳು!
ಮಂಗಳೂರು: ಮನೆಯ ಸಿಯಾಳ, ತೆಂಗಿನಕಾಯಿ ಮಾರುತ್ತಾರೆ, ಕುಡಿದು ಬಂದು ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಮಕ್ಕಳಿಬ್ಬರು ತಂದೆಯನ್ನೇ ಕಡಿದು ಕೊಲೆಗೈದ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕರಾಯ ಆನೆಪಲ್ಲ ಎಂಬಲ್ಲಿ ನಡೆದಿದೆ. ಧರ್ಣಪ್ಪ ಪೂಜಾರಿ(65) ಕೊಲೆಯಾದವರು.
ಪುತ್ರರಾದ ಮೋನಪ್ಪ ಮತ್ತು ನವೀನ ಪ್ರಕರಣದ ಆರೋಪಿಗಳು. ನಿನ್ನೆ ಮಧ್ಯರಾತ್ರಿ ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.