ಬೆಂಜನಪದವು: ಕಾರ್ ನಿಂದ ಸರಣಿ ಅಪಘಾತ, ಯುವತಿ ಮೃತ್ಯು
ಮಂಗಳೂರು: ನಗರದ ಹೊರವಲಯದ ಬೆಂಜನಪದವು ದಿವ್ಯಜ್ಯೋತಿ ಅಂಗಡಿಯ ಎದುರುಗಡೆ ಸ್ವಿಪ್ಟ್ ಕಾರೊಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ಆಕ್ಟಿವಾ ಸ್ಕೂಟರ್ ಮತ್ತು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಬೆಂಜನಪದವು ನಿವಾಸಿ ಯುವತಿ ಶ್ಯಾಮಲಾ(22) ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಪಾದಾಚಾರಿ ಸಹಿತ ಇಬ್ಬರಿಗೆ ಗಾಯಗಳಾದ ಘಟನೆ ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಸಂಭವಿಸಿದೆ.
ಶ್ಯಾಮಲಾ ತನ್ನ ಸ್ನೇಹಿತೆಯ ಜೊತೆಗೆ ಮೊಬೈಲ್ ರಿಚಾರ್ಜ್ ಮಾಡಿಸಲು ಅಂಗಡಿಗೆ ಹೋಗುತ್ತಿದ್ದಾಗ ಕಾರ್ ಬಡಿದಿದೆ. ಮತ್ತೊಬ್ಬ ಯುವತಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಕಾರ್ ಚಾಲಕ ಘಟನಾಸ್ಥಳದಿಂದ ಪರಾರಿಯಾಗಿದ್ದಾನೆ.



