ಬೆಂಗಳೂರು: ಭೀಕರ ಅಪಘಾತಕ್ಕೆ ಮಂಗಳೂರು ಮೂಲದ ಯುವಕ ಮೃತ್ಯು!

ಬೆಂಗಳೂರು: ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯ ಮಾಯಗಾನಹಳ್ಳಿ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವಕ ಸ್ಥಳದಲ್ಲೇ ದಾರುಣ ಸಾವಿಗೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತ ಯುವಕನ ಹೆಚ್ಚಿನ ಮಾಹಿತಿ ಲಭಿಸಿಲ್ಲ.
ಮಂಗಳೂರು ಆರ್ ಟಿಒ ದಲ್ಲಿ (ಕೆಎ 19 ಹೆಚ್ ಸಿ 2660) ಸುಝುಕಿ ಜಿಕ್ಸರ್ ಬೈಕ್ ಅನಂತ ಕಾಮತ್ ಎಂ. ಎಂಬ ಹೆಸರಿನಲ್ಲಿ ನೋಂದಣಿಗೊಂಡಿದ್ದು ಹಿಟ್ ಆ್ಯಂಡ್ ರನ್ ಆಗಿರಬೇಕೆಂದು ಶಂಕಿಸಲಾಗಿದೆ. ಸವಾರನ ತಲೆಯ ಮೇಲೆ ಘನವಾಹನ ಚಲಿಸಿದಂತೆ ಸಂಪೂರ್ಣ ಛಿದ್ರಗೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *