ಬೆಂಗಳೂರಿನ 28ರ ಯುವಕ ಕೊರೊನಾಗೆ ಬಲಿ!

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತ 28ರ ಹರೆಯದ ಯುವಕ ಹಠಾತ್ ಮೃತಪಟ್ಟ ಘಟನೆ ನಡೆದಿದೆ. ಯುವಕನಿಗೆ ಕೆಲದಿನಗಳ ಹಿಂದೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿದಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆಯಾಗಲೀ, ಇನ್ನಿತರ ಅನಾರೋಗ್ಯವಾಗಲೀ ಯುವಕನಲ್ಲಿ ಕಂಡುಬಂದಿರಲಿಲ್ಲ.
ಇಂದು ಮಧ್ಯಾಗ್ನ ಒಮ್ಮೆಲೇ ಅಸ್ವಸ್ಥಗೊಂಡ ಯುವಕ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈತನ ಸಾವಿನಿಂದ ಆಸ್ಪತ್ರೆ ವೈದ್ಯರೇ ಕಂಗಾಲಾಗಿದ್ದು ಸಾವಿನ ಹಿನ್ನೆಲೆಯನ್ನು ಹುಡುಕಲು ಮುಂದಾಗಿದ್ದಾರೆ. ಯುವಕನ ಸಾವಿಗೆ ಕೊರೊನಾ ವೈರಸ್ ಕಾರಣವಾಗಿರಬಹುದು, ಆದರೆ ಹಠಾತ್ತಾಗಿ ಸಾವು ಸಂಭಿವಿಸುವ ಉದಾಹರಣೆ ರಾಜ್ಯದಲ್ಲಿ ನಡೆದಿಲ್ಲ ಎನ್ನಬಹುದು. ಇಂದು ಬೆಂಗಳೂರಿನಲ್ಲಿ ಮತ್ತೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹಾಸನದಲ್ಲಿ 60 ವರ್ಷದ ವೃದ್ಧರನ್ನೂ ಮಹಾಮಾರಿ ಬಲಿಪಡೆದಿದ್ದು ಬೆಂಗಳೂರು ಒಂದರಲ್ಲೇ ಸಾವಿನ ಸಂಖ್ಯೆ 27ಕ್ಕೇರಿದೆ.

Leave a Reply

Your email address will not be published. Required fields are marked *