ಬಾರ್ಕೂರು: ಯುವತಿಯ ಪ್ರಾಣ ಉಳಿಸಿದ `ನಮನ’ಗೆ ಕೋಟಿ ನಮನ!

ಮಂಗಳೂರು: ನಿನ್ನೆ ಸಂಜೆ ಬಾರ್ಕೂರಿನ ಚೌಳಿಕೆರೆಗೆ ಕಾರ್ ಬಿದ್ದ ಪರಿಣಾಮ ಉದ್ಯಮಿ ಸಾವನ್ನಪ್ಪಿದ್ದರೆ ವಕ್ವಾಡಿ ನಿವಾಸಿ ಶ್ವೇತಾ ನೀರಲ್ಲಿ ಮುಳುಗಿ ಅಸ್ವಸ್ಥರಾಗಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಬಾಲಕಿ ನಮನಾ ಸ್ಥಳಕ್ಕೆ ಧಾವಿಸಿ ಸ್ಮøತಿ ಕಳೆದುಕೊಂಡಿದ್ದ ಶ್ವೇತಾಗೆ ಪ್ರಥಮ ಚಿಕಿತ್ಸೆ ನೀಡಿದ್ದಲ್ಲದೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗೆ ಸ್ಥಳೀಯರ ಜೊತೆ ಸಹಕರಿಸಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ವಕ್ವಾಡಿ ನಿವಾಸಿ ಶ್ವೇತಾ(22) ತಾನು ಕೆಲಸ ಮಾಡುತ್ತಿದ್ದ ಗ್ಲಾಸ್ ಮತ್ತು ಪ್ಲೈವುಡ್ ಮೆಟೀರಿಯಲ್ಸ್ ಮಾರಾಟದ ಅಂಗಡಿ ಮಾಲಕ ಸಂತೋಷ್ ಶೆಟ್ಟಿ(40) ಜೊತೆ ಕಾರಿನಲ್ಲಿ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿತ್ತು. ಚೌಳಿಕೆರೆ ಬಳಿ ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಕಾರ್ ನದಿಗೆ ಧುಮುಕಿದ್ದು ಸ್ಥಳೀಯರು ನೀರಿಗೆ ಜಿಗಿದು ಶ್ವೇತಾರನ್ನು ಮೇಲಕ್ಕೆತ್ತಿದ್ದರು. ಆದರೆ ಸಂತೋಷ್ ಶೆಟ್ಟಿ ಹೊರಬರಲಾರದೆ ಕಾರಿನಲ್ಲೇ ಸಾವನ್ನಪ್ಪಿದ್ದರು. ಸದ್ಯ ಶ್ವೇತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *