ಬಸ್ಸಲ್ಲೇ ಹೃದಯಾಘಾತ: ಟೆಕ್ಕಿ ಮೃತ್ಯು
ಮಂಗಳೂರು: ಕೋಟೇಶ್ವರ ನಿವಾಸಿ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಟೆಕ್ಕಿಯಾಗಿದ್ದ ಯುವಕ ನಿನ್ನೆ ರಾತ್ರಿ ಬಸ್ಸಿನಲ್ಲಿ ಮನೆಗೆ ಹೊರಟಿದ್ದು ಮನೆ ಸೇರುವ ಮುನ್ನವೇ ಬಸ್ಸಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ(25) ಎಂದು ಹೆಸರಿಸಲಾಗಿದೆ.
ಚೈತನ್ಯ ಬೆಂಗಳೂರಿನಿಂದ ಊರಿಗೆ ಬರಲು ದುರ್ಗಾಂಬಾ ಬಸ್ಸಿನಲ್ಲಿ ಹೊರಟಿದ್ದರು. ಇಂದು ಬೆಳಗ್ಗೆ 6:30ಕ್ಕೆ ತಂದೆ ವಿಷ್ಣುಮೂರ್ತಿಯವರಿಗೆ ಫೋನ್ ಮಾಡಿ ಮಾತಾಡಿದ್ದ ಚೈತನ್ಯ ತಾನು ಬಾರ್ಕೂರಿನಲ್ಲಿ ಬರುತ್ತಿರುವುದಾಗಿ ತಿಳಿಸಿದ್ದರು. 7:30ಕ್ಕೆ ವಿಷ್ಣುಮೂರ್ತಿ ಅವರು ಚೈತನ್ಯ ಮೊಬೈಲ್ ಗೆ ಕರೆ ಮಾಡಿದ್ದು ಈ ವೇಳೆ ಬಸ್ ಚಾಲಕ ಮಾತಾಡಿ, ನಿಮ್ಮ ಮಗ ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗಿ ತಿಳಿಸಿದ್ದ. ವಿಷ್ಣುಮೂರ್ತಿ ಕುಂದಾಪುರದ ವಿನಯಾ ಆಸ್ಪತ್ರೆಗೆ ಬಂದಾಗ ಅಲ್ಲಿ ಚೈತನ್ಯ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.