ಬಂಟ್ವಾಳ: ದುಷ್ಕೃತ್ಯಕ್ಕೆ ಸಂಚು; ತಲ್ವಾರ್, ಕಾರ್ ಬಿಟ್ಟು ಆರೋಪಿಗಳು ಎಸ್ಕೇಪ್!

ಮಂಗಳೂರು: ಕಾರ್ ನಲ್ಲಿ ತಲ್ವಾರ್, ದೊಣ್ಣೆ ಹಿಡಿದುಕೊಂಡು ದುಷ್ಕೃತ್ಯವೆಸಗಲು ಸಂಚು ರೂಪಿಸಿದ್ದ ಕುಖ್ಯಾತ ಕ್ರಿಮಿನಲ್ ಗಳು ಪೊಲೀಸ್ ವಾಹನ ಕಂಡು ಕಾರ್ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆದ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯ ನಂದಾವರ ಬಳಿ ನಡೆದಿದೆ.
maಅಪರಾಧದ ಉದ್ದೇಶದಿಂದ ಸಂಚು ರೂಪಿಸಿ ಹೊಂಚುಹಾಕಿ ಕುಳಿತು ಕೊಂಡಿದ್ದ ಆರೋಪಿಗಳು ಪೋಲೀಸರನ್ನು ನೋಡಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ನಡೆದಿದೆ.
ನಂದಾವರ ಶಾರದ ಹೈಸ್ಕೂಲ್ ನ ಬಳಿಯಲ್ಲಿ ಮುಸ್ತಫಾ ಮತ್ತು ಆತನ ಇಬ್ಬರು ಸಹಚರರು ಕಾರಿನಲ್ಲಿ ತಲವಾರು, ದೊಣ್ಣೆಯನ್ನು ಇಟ್ಟು ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹಾಗೂ ಸಿಬ್ಬಂದಿ ನಂದಾವರ ಕಡೆಗೆ ಗಸ್ತು ತೆರಳುತ್ತಿದ್ಧ ವೇಳೆ ಮುಸ್ತಫಾ ಹಾಗೂ ಇತರರು ಪೋಲೀಸರನ್ನು ಕಂಡು ಪರಾರಿಯಾಗಿದ್ದಾರೆ.
ಕಾರನ್ನು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ತಲವಾರು ಮತ್ತು ದೊಣ್ಣೆಗಳು ಕಂಡುಬಂದಿದೆ. ಪೋಲೀಸರು ಸುಮೋಟು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮುಸ್ತಫಾ ಮತ್ತು ಅವರ ತಂಡದ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.