ಫುತ್ ಪಾತಲ್ಲೇ ವ್ಯಾಪಾರ, ಪಾದಚಾರಿಗಳು ನಡೆಯುವುದೆಲ್ಲಿ..?

ಮಂಗಳೂರು: ನಗರದ ಲಾಲ್ ಬಾಗ್, ಲೇಡಿಹಿಲ್ ಬಳಿ ರೈನ್ ಕೋಟ್, ಕೊಡೆ ಮಾರಾಟ ಮಾಡುವ ವ್ಯಾಪಾರಿಗಳು ಫುಟ್ ಪಾತನ್ನು ಆಕ್ರಮಿಸಿಕೊಂಡಿದ್ದು ಇದರಿಂದ ಪಾದಚಾರಿಗಳು `ನಡೆಯುವುದೆಲ್ಲಿ ಮಾರಾಯ್ರೇ’ ಎಂದು ಪ್ರಶ್ನಿಸುತ್ತಿದ್ದಾರೆ. ಲೇಡಿಹಿಲ್ ನಿಂದ ಲಾಲ್ ಬಾಗ್ ಕಡೆಗೆ ಬರುವಲ್ಲಿ ಮಂಗಳಾ ಕ್ರೀಡಾಂಗಣ ಮುಂಭಾಗ, ವಿರುದ್ಧ ದಿಕ್ಕಿನ ರಸ್ತೆ, ಲಾಲ್ ಬಾಗ್ ನಿಂದ ಬಳ್ಳಾಲ್ ಬಾಗ್ ತೆರಳುವ ರಸ್ತೆ ಇಲ್ಲೆಲ್ಲ ಫುಟ್ ಪಾತ್ ವ್ಯಾಪಾರ ಜೋರಾಗಿಯೇ ನಡೆಯುತ್ತಿದ್ದು ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ.
ನಗರದಲ್ಲಿ ಫುಟ್ ಪಾತ್ ವ್ಯಾಪಾರ ವಿವಿಧೆಡೆ ನಡೆಯುತ್ತದೆ, ಆದರೆ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸ್ಥಳಾವಕಾಶವಿರುವಲ್ಲಿ ವ್ಯಾಪಾರ ಮಾಡಿದರೆ ಸಮಸ್ಯೆಯಿಲ್ಲ. ಹೀಗೆ ಜನರು ನಡೆದಾಡಲು ಸಾಧ್ಯವಾಗದ ರೀತಿ ವ್ಯಾಪಾರ ಮಾಡಿದರೆ ಜನರು ರಸ್ತೆಯ ಬದಿ ನಡೆಯಬೇಕು. ಮಳೆಗಾಲವಾದ್ದರಿಂದ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ರಸ್ತೆ ಪಕ್ಕ ನಡೆಯುವುದು ಅಪಾಯಕಾರಿ, ಅತೀವೇಗದಿಂದ ಸಾಗುವ ವಾಹನಗಳು ಪಾದಚಾರಿಗಳನ್ನು ಗಮನಿಸದೆ ಬೇಕಾಬಿಟ್ಟಿ ಸಾಗಿ ಸಂಚಕಾರ ತಂದೊಡ್ಡುತ್ತವೆ. ಹೀಗಾಗಿ ಸಂಬಂಧಪಟ್ಟ ಮನಪಾ ಎಚ್ಚೆತ್ತು ಫುಟ್ ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಮೀಸಲಿರಿಸಿದರೆ ಉತ್ತಮ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

1 thought on “ಫುತ್ ಪಾತಲ್ಲೇ ವ್ಯಾಪಾರ, ಪಾದಚಾರಿಗಳು ನಡೆಯುವುದೆಲ್ಲಿ..?

Leave a Reply

Your email address will not be published. Required fields are marked *