ಪೂಜಾರಿ ಸಹಚರ ಬಜಾ ಖಾನ್ ಸಿಸಿಬಿ ವಶಕ್ಕೆ
ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸಹಚರ ಯೂಸುಫ್ ಬಚಾ ಖಾನ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದಿದ್ದ ಬಿಲ್ಡರ್ ಸುಬ್ಬರಾವ್ ಹತ್ಯೆ ಪ್ರಕರಣದಲ್ಲಿ ಬಚಾ ಖಾನ್ ಪ್ರಮುಖ ಆರೋಪಿಯಾಗಿದ್ದ.
ಬಚಾ ಖಾನ್ ಛೋಟಾ ರಾಜನ್ ಸಹಚರನಾಗಿದ್ದು ನಂತರ ರಾಜನ್ ತಂಡದಿಂದ ಹೊರಬಂದು ರವಿ ಪೂಜಾರಿ ಗ್ಯಾಂಗ್ ಸೇರಿಕೊಂಡಿದ್ದ. ಪೂಜಾರಿ ಜೊತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.