ಪೂಜಾರಿ ಬಂಟ “ಗುಲಾಂ”ಗೆ ಸಿಸಿಬಿ ಡ್ರಿಲ್! ‘ಪ್ರಸನ್ನ’ರನ್ನು ಫಿಕ್ಸ್ ಮಾಡಲು ಶತಪ್ರಯತ್ನ!?

ಮಂಗಳೂರು: ಎರಡು ದಿನಗಳ ಹಿಂದೆ ಬಂಧಿತನಾಗಿರುವ ರವಿ ಪೂಜಾರಿ ಬಂಟ ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಗುಲಾಂ ಮುಹಮ್ಮದ್ ನನ್ನು ವಶಕ್ಕೆ ಪಡೆದಿರುವ ಸಿಸಿಬಿ ರಾತ್ರಿ ಹಗಲೆನ್ನದೆ
ಡ್ರಿಲ್’ ಮಾಡುತ್ತಿದ್ದು, ರವಿ ಪೂಜಾರಿಗೂ ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸನ್ನಗೂ `ಲಿಂಕ್’ ಇದೆ ಅನ್ನೋದನ್ನು ಕೋರ್ಟಲ್ಲಿ ಸಾಕ್ಷಿಹೇಳಲು ಗುಲಾಂನಲ್ಲಿ ಸಿಸಿಬಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಪೊಲೀಸ್ ಮೂಲವೊಂದು ಬಹಿರಂಗಪಡಿಸಿದ್ದು ಈ ಕುರಿತ ಮತ್ತಷ್ಟು ಮಾಹಿತಿ “ಜಯಕಿರಣ”ಕ್ಕೆ ಲಭ್ಯವಾಗಿದೆ.
ಕಳೆದೆರಡು ದಿನಗಳಿಂದ ಗುಲಾಂಗೆ ತೀವ್ರವಾಗಿ ಟಾರ್ಚರ್ ನೀಡಲಾಗುತ್ತಿದ್ದು ಇದೆಲ್ಲದರ ಹಿಂದೆ ಜಿಲ್ಲೆಯ ಮಾಜಿ ಡಿವೈಎಸ್‍ಪಿಯೊಬ್ಬರ ಹೆಸರು ಕೇಳಿಬರುತ್ತಿದೆ. ಪೂಜಾರಿ ಬಂಧನದಲ್ಲಿ ಮಹತ್ವದ ಪಾತ್ರ ವಹಿಸಿರುವ ವೆಂಕಟೇಶ್ ಪ್ರಸನ್ನ ವಿರುದ್ಧ ಇಲಾಖೆಯ ಒಳಗೇ ಮಸಲತ್ತು ನಡೆಯುತ್ತಿರುವುದು ಬಟಾಬಯಲಾಗಿದ್ದು ಇಲಾಖೆಯ ಕಾರ್ಯವೈಖರಿಯನ್ನು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.