ಪುಂಜಾಲಕಟ್ಟೆ: ಪೆಟ್ರೊಲ್ ಸುರಿದು ಅಣ್ಣ- ತಂಗಿ ಆತ್ಮಹತ್ಯೆ!
ಮಂಗಳೂರು: ಅಣ್ಣ- ತಂಗಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಗೈದ ಹೃದಯ ವಿದ್ರಾವಕ ಘಟನೆ ನಿನ್ನೆ ರಾತ್ರಿ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ಸಂಭವಿಸಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ನೀಲಯ್ಯ ಶೆಟ್ಟಿ ಗಾರ್(42) , ಕೇಸರಿ ( 39) ಮೃತಪಟ್ಟವರು. ಅವಿವಾಹಿತರಾಗಿದ್ದ ಇವರು ಅನಾರೋಗ್ಯ ದಿಂದ ಬಳಲುತ್ತಿದ್ದು, ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಮನೆಯ ಕೊಠಡಿಯಲ್ಲಿ ಕೃತ್ಯ ಗೈದಿದ್ದಾರೆ. ಮನೆಯಲ್ಲಿ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು, ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ನರಳಾಟದ ಶಬ್ದ ಕೇಳಿ ಬಂದಾಗ ಘಟನೆ ತಿಳಿದು ಬಂದಿತ್ತು. ಬಳಿಕ ಸ್ಥಳೀಯರು ಸೇರಿ ಗಂಭೀರ ಗಾಯಗೊಂಡ ಇಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ಸಾಗಿಸಿದರಾದರೂ ಮೃತಪಟ್ಟಿದ್ದಾರೆ.
ಪೆಟ್ರೋಲ್ ತಂದು ದಾಸ್ತಾನು ಇರಿಸಿ ತಡರಾತ್ರಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೇಸರಿ 30 ವರ್ಷಗಳಿಂದ ಮಾನಸಿಕ ವಾಗಿ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ. ಕೆಲ ತಿಂಗಳ ಹಿಂದೆ ಇವರ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ತೀರಿಕೊಂಡಿದ್ದರು.