`ಪೀರಿಯೆಡ್’ ವೇಳೆ ಪೂಜೆಯಲ್ಲಿ ಪಾಲ್ಗೊಂಡಿದ್ದೆ..!!

ಬೆಂಗಳೂರು: “ಪೀರಿಯೆಡ್ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗವಹಿ ಸಿದ್ದೆ” ಎಂದು ನಟಿ ಶ್ರದ್ಧಾ ಶ್ರೀನಾಥ್ ತನ್ನ ಮೊದಲ ಋತುಚಕ್ರದ ಬಗ್ಗೆ ಸಾಮಾಜಿಕ ತಾಣದಲ್ಲಿ ಬಹಿರಂಗವಾಗಿ ಬೋಲ್ಡ್ ಆಗಿ ಹೇಳಿದ್ದಾರೆ.
ಈ ಬಗ್ಗೆ ತನ್ನ ಇನ್ ಸ್ಟಾಗ್ರಾಂ ಪೋಸ್ಟ್‍ನಲ್ಲಿ ಹೇಳಿಕೊಂಡಿರುವ ಅವರು, “ಆಗ ನನಗೆ 14 ವಯಸ್ಸು. ಕುಟುಂಬದ ಒಂದು ಪೂಜೆ ಯಲ್ಲಿ ನಾನು ಭಾಗಿಯಾಗಿದ್ದಾಗ ನನಗೆ ಋತುಚಕ್ರ ವಾಗಿತ್ತು. ಆಗ ನನ್ನೊಂದಿಗೆ ತಾಯಿ ಇರಲಿಲ್ಲ, ಆದ್ದ ರಿಂದ ನಾನು ನನ್ನ ಚಿಕ್ಕಮ್ಮನೊಂದಿಗೆ ಕುಳಿತೆ ಹಾಗೂ ಆತಂಕದಿಂದ ಅವರಿಗೆ ಹೇಳಿದೆ. (ಏಕೆಂದರೆ ನನ್ನ ಬಳಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ). ಈ ಸಂದರ್ಭದಲ್ಲಿ ಚಿಂತೆಯಲ್ಲಿದ್ದ ನನ್ನನ್ನು ನೋಡಿದ ಒಬ್ಬರು ಒಳ್ಳೆಯ ಮಹಿಳೆ, ‘ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸ್ತಾರೆ’ ಎಂದು ಹೇಳಿದರು. ನಾನು 14 ವರ್ಷದವಳಿರುವಾಗಲೇ ಸ್ತ್ರೀವಾದಿ ಮತ್ತು ಈ ಸಂಪ್ರದಾಯಗಳನ್ನು ನಂಬದವಳಾದೆ” ಎಂದು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಯುನಿಸೆಫ್‍ನ #ಖeಜಆoಣಅhಚಿಟಟeಟಿge ಅನ್ನು ಸ್ವೀಕರಿಸಿದ್ದು ತಮ್ಮ ಅಂಗೈ ಮಧ್ಯದಲ್ಲಿ ಕೆಂಪು ಬಣ್ಣದ ಚುಕ್ಕೆ ಹೊಂದಿರುವ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಋತುಚಕ್ರದ ನೈರ್ಮಲ್ಯದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೀಗ ನಟಿ ಶ್ರದ್ಧಾ ಶ್ರೀನಾಥ್ ಅವರು ಋತುಚಕ್ರದ ಸಂದರ್ಭದಲ್ಲಿ ತನಗಾದ ಅನುಭವದ ಬಗ್ಗೆ ಹಾಗೂ ತನ್ನ ನಿಲುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಆಗಿ ಹಂಚಿಕೊಂಡಿದ್ದು ಇವರ ನಿಲುವಿಗೆ ಕೆಲವರು ಶಭಾಷ್ ಎಂದರೆ ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *