ಪಾದೂರು ಕಚ್ಛಾತೈಲ ಸಂಗ್ರಹಾಗಾರದಲ್ಲಿ ಅನಿಲ ಸೋರಿಕೆ ಭೀತಿ!

ಉಡುಪಿ: ಕಾಪು ಸಮೀಪದ ಪಾದೂರು ಐಎಸ್‍ಪಿಆರ್‍ಎಲ್ ಕಚ್ಛಾ ತೈಲ ಸಂಗ್ರಹಾಗಾರದಲ್ಲಿ ಅನಿಲ ಸೋರಿಕೆಯ ಭೀತಿ ಎದುರಾಗಿದೆ. ನಿನ್ನೆ ಬೆಳಗ್ಗೆಯಿಂದಲೇ ಅನಿಲ ಸೋರಿಕೆಯ ವಾಸನೆ ಪರಿಸರದಲ್ಲಿ ಹಬ್ಬಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪಾದೂರು ಕೂರಾಲು ಪರಿಸರದ ಮನೆಗಳ ಕೆಲವು ಮಕ್ಕಳು ವಾಂತಿ ಮಾಡಿದ್ದು ವೃದ್ಧರು ಮೂರ್ಛೆ ಹೋದ ಘಟನೆಯೂ ನಡೆದಿದೆ. ಇಷ್ಟೆಲ್ಲ ಆದರೂ ಸಂಬಂಧಪಟ್ಟ ಇಲಾಖೆ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾಪು ಪೊಲೀಸ್ ಠಾಣಾಧಿಕಾರಿ ಮಹೇಶ್ ಪ್ರಸಾದ್, ಮಾಲಿನ್ಯ ನಿಯಂತ್ರಣ ಅದಿಕಾರಿ ವಿಜಯಾ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಂಪೆನಿ ಅಧಿಕಾರಿಗಳು ಮಾತ್ರ ಯಾವುದೇ ರೀತಿಯಲ್ಲಿ ಅನಿಲ ಸೋರಿಕೆಯಾಗಿಲ್ಲ ಎಂದು ಘಟನೆಯನ್ನು ನಿರಾಕರಿಸಿದ್ದಾರೆ. ಪಾದೂರು ಸ್ಥಾವರ ಸ್ಥಾಪನೆಯಾದ ಬಳಿಕ ಆಗಾಗ ಇಂಥ ಸಮಸ್ಯೆಗಳು ಕಂಡುಬರುತ್ತಿದ್ದರೂ ಕಂಪೆನಿ ಅಧಿಕಾರಿಗಳು ಜನರ ಪ್ರಾಣಕ್ಕೆ ಬೆಲೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *