ಪಾಕಿಸ್ತಾನದಿಂದ ಶೆಲ್ ದಾಳಿ: ಮನೆಗಳಿಗೆ ಹಾನಿ

ಶ್ರೀನಗರ: ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ಸೆಕ್ಟರ್‍ನಲ್ಲಿ ಭಾನುವಾರ ಮುಂಜಾನೆ ಶೆಲ್ ದಾಳಿ ನಡೆಸಿದ್ದು ಇದರಿಂದಾಗಿ ವ್ಯಕ್ತಿಯೊಬ್ಬರಿಗೆ ಗಾಯ ವಾಗಿದ್ದರೆ ಎರಡು ಮನೆಗಳು ಭಾಗಶಃ ಹಾನಿಯಾಗಿದೆ ಎಂದು ವರರಿಯಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಗೋಹ್ಲಾದ್ ಗ್ರಾಮದ ಮೊಹಮ್ಮದ್ ಯಾಸೀನ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನವು ಶನಿವಾರವೂ ಕೂಡಾ ಗುಂಡಿನ ದಾಳಿ ಮತ್ತು ಶೆಲ್ ಆಕ್ರಮಣ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಭಾನುವಾರ ಮುಂಜಾನೆ ಸುಮಾರು 3.10 ಕ್ಕೆ ಭಾರತದ ಸೈನಿಕ ನೆಲೆ ಮತ್ತು ಗ್ರಾಮದ ಮೇಲೆ ಪಾಕಿಸ್ತಾನ ಶೆಲ್ ದಾಳಿ ನಡೆಸಿದ್ದು ಸುಮಾರು ನಾಲ್ಕು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊ ಬ್ಬರಿಗೆ ಗಾಯವಾಗಿದ್ದು ಎರಡು ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.