`ಪರಿಸ್ಥಿತಿ ಕೈಮೀರಿಲ್ಲ, ಲಾಕ್ ಡೌನ್ ಜಾರಿ ಮಾಡಲ್ಲ’ -ಆರ್.ಅಶೋಕ್ ಹೇಳಿಕೆ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಆದ್ದರಿಂದ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಯಾವುದೇ ತೀರ್ಮಾನವನ್ನು ಸರಕಾರ ಕೈಗೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಅವರು ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು.
ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸೀಲ್ ಡೌನ್ ಜಾರಿಯಲ್ಲಿರುತ್ತದೆ, ಆದರೆ ಲಾಕ್ ಡೌನ್ ಜಾರಿಮಾಡಲಾಗದು ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ. ಜನರು ಕೋವಿಡ್ ಜೊತೆ ಬದುಕುವುದು ಅನಿವಾರ್ಯ, ನೈಟ್ ಕಫ್ರ್ಯೂನಲ್ಲಿ ಯಾವುದೇ ಬದಲಾವಣೆಯಿಲ ಎಂದು ಅಶೋಕ್ ಹೇಳಿದ್ದಾರೆ.
anilkumar