ಪಡೀಲ್ ಮುಖ್ಯರಸ್ತೆಯಲ್ಲಿ ಬಾಯ್ದೆರೆದ ಗುಂಡಿ!

ಮಂಗಳೂರು: ಪಡೀಲ್ ನಲ್ಲಿ ಎರಡನೇ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಮುಗಿದಿದ್ದು ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ಸಜ್ಜಾಗಿತ್ತು. ಆದರೆ ಇಂದು ಇಲ್ಲೇ ಪಕ್ಕದಲ್ಲಿ ಮುಖ್ಯರಸ್ತೆಯಲ್ಲಿ ಹಠಾತ್ ಗುಂಡಿಯೊಂದು ಬಾಯ್ದೆರೆದಿದ್ದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಕಳೆದೆರಡು ವರ್ಷಗಳಿಂದ ಅಂಡರ್‍ಪಾಸ್‍ನ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು ಈ ವಾರದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಬೇಕಿತ್ತು. ರೋಲರ್ ನಲ್ಲಿ ರಸ್ತೆಯನ್ನು ಸಮತಟ್ಟುಗೊಳಿಸುವ ವೇಳೆ ಡಾಮರು ಕುಸಿದು ಸ್ತೆಯಲ್ಲಿ ಸುಮಾರು ಮೂರು ಅಡಿ ಆಳದ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ಅಂಡರ್ ಪಾಸ್ ಉದ್ಘಾಟನೆ ಮುಂದೂಡಲ್ಪಟ್ಟಿದೆ. ಬರೋಬ್ಬರಿ 5 ಕೋಟಿ ರೂ. ವೆಚ್ಚದಲ್ಲಿ ಅಂಡರ್‍ಪಾಸ್ ನಿರ್ಮಾಣವಾಗುತ್ತಿದೆ.

Leave a Reply

Your email address will not be published. Required fields are marked *