ಪಂಪ್ ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು!

ಮಂಗಳೂರು: ರಾಜ್ಯದಲ್ಲಿ ಸಾವರ್ಕರ್ ಹೆಸರು ಪ್ರಸ್ತಾಪದಲ್ಲಿರುವಾಗಲೇ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಗೆ ವೀರ ಸಾವರ್ಕರ್ ಎಂದು ನಾಮಕರಣ ಮಾಡಲಾಗಿದೆ. ಹೌದು..! ಇದು ಅಚ್ಚರಿ ಆದರೂ ಸತ್ಯ. ಇಂದು ರಾತ್ರಿ ಫ್ಲೈ ಓವರ್ ಮೇಲೆ ವೀರ ಸಾವರ್ಕರ್ ಹೆಸರು ಹಾಕಿರುವ ಫ್ಲೆಕ್ಸ್ ಹಾಕಲಾಗಿದೆ.
ಪಂಪ್ ವೆಲ್ ಸೇತುವೆಗೆ ಸಡನ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಪಕ್ಕದಲ್ಲೇ ಬಜರಂಗದಳ ಎಂದು ಬರೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *