ನಮಾಝ್ ಮನೆಗಳಲ್ಲೇ ನಿರ್ವಹಿಸಲು ಖಾಝಿ ಕರೆ

ಮಂಗಳೂರು: ರಾಜ್ಯದ ಮಸೀದಿಗಳಲ್ಲಿ ಜೂ. 8ರಿಂದ ನಮಾಝ್ ಮತ್ತಿತರ ಧಾರ್ಮಿಕ ಚಟುವಟಿಕೆ ನಡೆಸಲು ಸರಕಾರ ಅನುಮತಿ ನೀಡಿರುವುದು ಶ್ಲಾಘನೀಯ. ಈ ಮಧ್ಯ ಸರಕಾರದ ಮಾರ್ಗಸೂಚಿಯನ್ನೂ ಕಡ್ಡಾಯವಾಗಿ ಪಾಲಿಸುವುದು ಸಮುದಾಯದ ಕರ್ತವ್ಯವಾಗಿದೆ . ಹಾಗಾಗಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಲು ಸಾಧ್ಯವಿರುವವರು ಮಾತ್ರ ಮಸೀದಿಗೆ ತರಳಬಹುದು ಅಥವಾ ಅದನ್ನು ಸಾಧ್ಯವಿರುವ ಆಡಳಿತ ಕಮಿಟಿಯು ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬಹುದು . ಈ ಬಗ್ಗೆ ಏನಿದ್ದರೂ ಕೂಡ ಆಯಾ ಜಮಾಅತ್‌ನವರು ಸ್ವಯಂ ನಿರ್ಧಾರ ತಗೆದುಕೊಳ್ಳಬಹುದು ಎಂದು ದ.ಕ.ಜಿಲ್ಲಾ ಖಾಝಿ ಅಲ್ಲಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿರ್ದೇಶನ ನೀಡಿದ್ದಾರೆ . ನರಕಾರದ ಮಾರ್ಗಸೂಚಿ ಪಾಲಿಸಲು ಸಾಧ್ಯವಿರುವ ಮಸೀದಿಗಳಲ್ಲಿ ಆಯಾ ಜಮಾಅತ್‌ನವರೇ ಈ ಬಗ್ಗೆ ತೀರ್ಮಾನಿಸಿ ಜುಮಾ ಮತ್ತು ಜಮಾಅತ್ ನಮಾಝ್ ಗಳನ್ನು ನಿರ್ವಹಿಸಬಹುದು . ಈಗಲೂ ಕೂರೋನ ವೈರಸ್ ರೋಗವು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ವಿಶ್ವವೇ ಭಯದ ವಾತಾವರಣದಲ್ಲಿದೆ, ಇಂತಹ ಸಂದರ್ಭದಲ್ಲಿ ನಮಾಝ್ ಗಳನ್ನು ಮನೆಗಳಲ್ಲೇ ನಿರ್ವಹಿಸಲು ಶರೀಅತ್ ಅನುಮತಿಸಿದೆ ಎಂದು ಖಾಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

2 thoughts on “ನಮಾಝ್ ಮನೆಗಳಲ್ಲೇ ನಿರ್ವಹಿಸಲು ಖಾಝಿ ಕರೆ

Leave a Reply

Your email address will not be published. Required fields are marked *