ನಂದಿ ಗಿರಿಧಾಮದಲ್ಲಿ ತಂತಿಬೇಲಿಗೆ ಸಿಲುಕಿ ಚಿರತೆ ಸಾವು
ದೊಡ್ಡಬಳ್ಳಾಪುರ: ನಂದಿ ಗಿರಿಧಾಮದ ಬಳಿ ಕಬ್ಬಿಣದ ತಂತಿಬೇಲಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಇಂದು ಸಂಜೆ ಬೆಳಕಿಗೆ ಬಂದಿದೆ.
ಚಿರತೆ ತಂತಿಬೇಲಿ ಜಿಗಿಯಲು ಯತ್ನಿಸುವ ವೇಳೆ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ನಂದಿ ಗಿರಿಧಾಮದ ಬಳಿಯ ನಿವಾಸಿಗಳಲ್ಲಿ ಚಿರತೆಯ ಭಯ ಹೆಚ್ಚಿದ್ದು ಇಲ್ಲಿ ಆಗಾಗ ಚಿರತೆ ಕಂಡುಬರುತ್ತಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕಳೇಬರವನ್ನು ಸ್ಥಳಾಂತರಿಸಿದ್ದಾರೆ.
