ಧೋನಿ ಇನ್ನು ಟೀಂ ಇಂಡಿಯಾ ಪ್ರತಿನಿಧಿಸಲ್ಲ!

ಮುಂಬೈ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಇನ್ನೂ ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಐಪಿಎಲ್‌ನ್ಲಲಿ ಚೆನ್ನೈ ಸೂಪರ್ ಕಿಂಗ್‌ನಲ್ಲಿ ಧೋನಿ ಸಹ ಆಟಗಾರನಾಗಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಧೋನಿ ಟೀಮ್ ಇಂಡಿಯಾವನ್ನು ಭವಿಷ್ಯದಲ್ಲಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಚೆನ್ನೈ ತಂಡದ ಅಭ್ಯಾಸ ಶಿಬಿರದಲ್ಲಿ ನಾನಿದ್ದೆ. ಆಗ ಜನರು ನನ್ನ ಬಳಿ ಧೋನಿ ಟೀಮ್ ಇಂಡಿಯಾಗೆ ಮತ್ತೆ ಆಡುತ್ತಾರ? ಮತ್ತೆ ಅವರು ಆಯ್ಕೆಯಾಗುತ್ತಾರ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ನಾನು ಆಗ ಅದಯಾವುದೂ ನನಗೆ ಗೊತ್ತಿಲ್ಲ. ಅದೆಲ್ಲೂ ಆತನಿಗೆ ಬಿಟ್ಟ ನಿರ್ಧಾರ. ಆಡಬೇಕೋ ಬೇಡ್ವೋ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದಾಗಿ ಹರ್ಭಜನ್ ರೋಹಿತ್‌ಗೆ ತಿಳಿಸಿದರು. ಐಪಿಎಲ್‌ನಲ್ಲಿ ಧೋನಿ 100% ಪಾಲ್ಗೊಳ್ಳುತ್ತಾರೆ. ಆದರೆ ಟೀಮ್ ಇಂಡಿಯಾದಲ್ಲಿ ಅವರು ಆಡುವುದನ್ನು ಬಯಸುತ್ತಿದ್ದಾರೋ ಇಲ್ಲವೋ ಎಂಬುದನ್ನು ನಾವು ಕಂಡುಕೊಳ್ಳಬೇಕು. ನನಗೆ ತಿಳಿದಿರುವಂತೆ ಅವರು ಆಡಲು ಬಯಸುತ್ತಿಲ್ಲ. ಭಾರತಕ್ಕೆ ಆಡುವುದನ್ನು ಅವರು ಮುಗಿಸಿದ್ದಾರೆ. ನನಗೆ ತಿಳಿದಿರುವಂತೆ ಧೋನಿ ಮತ್ತೆ ನೀಲಿ ಜರ್ಸಿಯಲ್ಲಿ ಅಂಗಳಕ್ಕೆ ಕಣಕ್ಕಿಳಿವುದಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದಾರೆ.