ದ.ಕ. ಜಿಲ್ಲೆಯಲ್ಲಿ 32 ಮಂದಿಗೆ ಕೊರೋನಾ ಸೋಂಕು, ಲೇಡಿಗೋಷನ್ ಆಸ್ಪತ್ರೆ ಸೀಲ್ ಡೌನ್!!

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಮತ್ತೆ 32 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕದಿಂದಲೇ ಹೆಚ್ಚಿನ ಪಾಸಿಟಿವ್ ಪತ್ತೆಯಾಗಿದೆ. 10 ಮಂದಿಗೆ ಪ್ರಾಥಮಿಕ ಸಂಪರ್ಕ ಹಿನ್ನೆಲೆಯಲ್ಲಿ ಪಾಸಿಟಿವ್ ಪತ್ತೆಯಾದರೆ ದ್ವಿತೀಯ ಸಂಪರ್ಕದಿಂದ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಮಂಗಳೂರಿನ ಜಿಲ್ಲಾ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಬಂದ್ ಮಾಡಲಾಗಿದೆ. ನಾಳೆಯಿಂದ ಜು.6ರವರೆಗೆ ಹೊರ ರೋಗಿ ಮತ್ತು ಒಳರೋಗಿ ಸೇವೆ ಸ್ಥಗಿತಗೊಂಡಿದೆ. ಆಸ್ಪತ್ರೆಯ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ಕ್ವಾರೆಂಟೈನ್ ನಲ್ಲಿದ್ದಾರೆ. ಆಸ್ಪತ್ರೆಯ ಎಲ್ಲಾ ವಿಭಾಗ ಸ್ಯಾನಿಟೈಝ್ ಮಾಡಲು ಬಂದ್ ಮಾಡಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *